Friday, March 29, 2024
spot_imgspot_img
spot_imgspot_img

ಪ್ರಾಣ ಕೊಟ್ಟು ಉಗ್ರರ ಒಳ ನುಸುಳುವಿಕೆ ತಡೆದರು- ದೇಶ ಸೇವೆಗೆ ಬಂದಿದ್ದ 24 ವರ್ಷದ ಸೇನಾಧಿಕಾರಿ ಹುತಾತ್ಮ

- Advertisement -G L Acharya panikkar
- Advertisement -

ಶ್ರೀನಗರ(ನ.9): ಜಮ್ಮು ಕಾಶ್ಮೀರದ ಮಚಿಲ್ ನಲ್ಲಿ ಭಯೋತ್ಪಾದಕರ ವಿರುದ್ದ ಹೋರಾಟದಲ್ಲಿ ಯುವ ಸೇನಾಧಿಕಾರಿಯೊಬ್ಬರು ತಮ್ಮ ಪ್ರಾಣ ಅರ್ಪಿಸಿದ್ದಾರೆ. ಮದ್ರಾಸ್ ರೆಜಿಮೆಂಟಿನಲ್ಲಿ ಕ್ಯಾಪ್ಟನ್ ಆಗಿದ್ದ ಅಶುತೋಷ್ ಕುಮಾರ್ ಹುತಾತ್ಮರಾಗಿದ್ದಾರೆ. ಅಶುತೋಷ್ ಕುಮಾರ್ ಅವರಿಗೆ ಕೇವಲ 24 ವರ್ಷ ಪ್ರಾಯವಾಗಿತ್ತು.

ಚಿಕ್ಕಂದಿನಿಂದಲೇ ಸೇನೆಗೆ ಸೇರಬೇಕೆಂಬ ಕನಸು ಹೊಂದಿದ್ದ ಅಶುತೋಷ್ ತಮ್ಮ ಕನಸು ಸಾಕಾರಗೊಳಿಸಿದ್ದರು. ದೇಶ ಸೇವೆಗೆ ಸದಾ ಮುಂದಿದ್ದರು. ಜಮ್ಮು ಕಾಶ್ಮೀರದ ಮುಂಚೂಣಿ ನೆಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಶುತೋಷ್ ಅವರ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪ಼ಡಿಸಿದ್ದರು.

ಜಮ್ಮು ಕಾಶ್ಮೀರದಲ್ಲಿ ಭಾರತಕ್ಕೆ ನುಸುಳಲು ಯತ್ನಿಸಿದ್ದ ಉಗ್ರರ ಯತ್ನ ವಿಫಲಗೊಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ತಮ್ಮ ಪ್ರಾಣ ಅರ್ಪಿಸಿ ದೇಶದ ಭದ್ರತೆ ಖಾತರಿಪಡಿಸಿದ್ದಾರೆ.ಇದೇ ಕಾರ್ಯಾಚರಣೆಯಲ್ಲಿ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಆರ್ ಮಹೇಶ್ ಎಂಬ ಯೋಧ ಕೂಡ ಹುತಾತ್ಮರಾಗಿದ್ದಾರೆ. ನಿಜಾಮಾಬಾದ್ ಜಿಲ್ಲೆಯ ಕೋಮನ್ ಪಳ್ಳಿ ಗ್ರಾಮದವರಾಗಿದ್ದ ಮಹೇಶ್ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮಚಿಲ್ ನಲ್ಲಿ ಭದ್ರತಾಪಡೆ ನಡೆಸಿದ ಕಾರ್ಯಾಚರಣೆ ಅತ್ಯಂತ ಮಹತ್ವದಾಗಿದ್ದು ಎಲ್ಲ ಉಗ್ರರನ್ನು ಹೊಡೆದುರಳಿಸಲಾಗಿದೆ.

- Advertisement -

Related news

error: Content is protected !!