Tuesday, April 23, 2024
spot_imgspot_img
spot_imgspot_img

ಮೂಡಡ್ಕ ದರ್ಗಾ ಶರೀಫ್ ಉರೂಸ್ ಗೆ ಇಂದು ಚಾಲನೆ

- Advertisement -G L Acharya panikkar
- Advertisement -

ಸರಳಿಕಟ್ಟೆ: ಇತಿಹಾಸ ಪ್ರಸಿದ್ಧ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ – ಮೂಡಡ್ಕ ದರ್ಗಾ ಶರೀಫ್ ಉರೂಸ್ ಗೆ ಇಂದು (ಮಾ.11) ಚಾಲನೆ ನೀಡಲಿದ್ದು, ಮಾರ್ಚ್ 14 ಆದಿತ್ಯವಾರದಂದು ಸಮಾರೋಪಗೊಳ್ಳಲಿದೆ.

ಇಂದು ರಾತ್ರಿ ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ ದುವಾಶಿರ್ವಚನಗೈಯಲಿದ್ದು, ಖ್ಯಾತ ವಾಗ್ಮಿ ಪೇರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಪ್ರಭಾಷಣಗೈಯಲಿದ್ದಾರೆ.

ಮಾರ್ಚ್ 12ರಂದು ಶುಕ್ರವಾರ ರಾತ್ರಿ ಶೈಖುನಾ ಅಬ್ಬಾಸ್ ಸ ಅದಿ ಉಸ್ತಾದ್ ಮದರ್ರಿಸ್ ಸರಳಿಕಟ್ಟೆ ಅವರು ದುಆ ನೆರವೇರಿಸಲಿದ್ದು, ಹುಸೈನ್ ಸಅದಿ ಕೆ.ಸಿರೋಡ್ ಧಾರ್ಮಿಕ ಪ್ರವಚನಗೈಯಲಿದ್ದಾರೆ.

ಮಾರ್ಚ್ 13 ರಂದು ಜಲಾಲಿಯ್ಯ ಮಜ್ಲಿಸ್ ಮತ್ತು ಮೂಡಡ್ಕ ವಿದ್ಯಾ ಸಂಸ್ಥೆಯ ಸ್ಥಾಪಕ ಶೈಖುನಾ T.H ಉಸ್ತಾದರ ಆಂಡ್ ನೇರ್ಚೆ ನಡೆಯಲಿದ್ದು, ದ.ಕ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಖುರ್ರತುಸ್ಸಾದಾತ್ ಕೂರತ್ ತಂಙಳ್ ದುವಾಶೀರ್ವಚನ ನೀಡಲಿದ್ದು, ಸಯ್ಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಜಲಾಲಿಯ್ಯ ಮಜ್ಲೀಸ್ ಗೆ ನೇತೃತ್ವ ನೀಡಲಿದ್ದಾರೆ.


ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಬಾಷಣ ನಡೆಸಲಿದ್ದು, ಮೂಡಡ್ಕ ಸಂಸ್ಥೆಯ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ಅನುಸ್ಮರಣಾ ಭಾಷಣ ನಡೆಸಲಿದ್ದಾರೆ.

ಮಾರ್ಚ್ 14ರಂದು ಆದಿತ್ಯವಾರ ಬೆಳಿಗ್ಗೆ 10 ರಿಂದ ಖತಮುಲ್ ಕುರ್-ಆನ್ ಮಜ್ಲಿಸ್, ಹಳೆ ವಿದ್ಯಾರ್ಥಿ ಸಂಗಮ, ಗಲ್ಫ್ ಮೀಟ್ ಹಾಗೂ ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ. ಅಸ್ಸಯ್ಯದ್ ಇಸ್ಮಾಯಿಲ್ ಅಲ್-ಹಾದಿ ತಂಙಳ್ ಅಧ್ಯಕ್ಷತೆ ವಹಿಸಲಿದ್ದು, ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕೂರಿಕುಝಿ ನೇತೃತ್ವ ನೀಡಲಿದ್ದಾರೆ. ಸಯ್ಯದ್ ಪಾಟ್ರಕೋಡಿ ತಂಙಳ್ ಖತಮುಲ್ ಕುರ್-ಆನ್ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ.ಖ್ಯಾತ ವಾಗ್ಮಿ ಎಂ.ಎ ಸ್ವಲಾವುದ್ದೀನ್ ಸಖಾಫಿ ಮಾಡನ್ನೂರು ಮುಖ್ಯ ಪ್ರಭಾಷಣಗೈಯಲಿದ್ದಾರೆ ಎಂದು ಉರೂಸ್ ಸಮಿತಿಯ ಕನ್ವೀನರ್ ಕೆ.ಎಂ. ಹಕೀಂ ತನಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!