Friday, June 19, 2026
spot_imgspot_img
spot_imgspot_img

ಗುಜರಾತ್ ನ ಮಾಜಿ ಮುಖ್ಯಮಂತ್ರಿ ಮಾಧವ ಸಿಂಗ್ ಸೋಲಂಕಿ ನಿಧನ!

- Advertisement -
- Advertisement -

ಗಾಂಧಿನಗರ: ಗುಜರಾತ್ ರಾಜ್ಯದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಮಾಧವ ಸಿಂಗ್ ಸೋಲಂಕಿ ರವರು ಇಂದು ಬೆಳಗ್ಗೆ ನಿಧನ ಹೊಂದಿದರು. 94 ವರ್ಷದ ಮಾಧವ ಸಿಂಗ್ ಸೋಲಂಕಿ ರವರು ಗಾಂಧಿನಗರದ ತಮ್ಮನಿವಾಸದಲ್ಲಿ ಕೊನೆಯುಸಿರೆಳೆದರು.

ವೃತ್ತಿಯಲ್ಲಿ ವಕೀಲನಾಗಿದ್ದ ಸೋಲಂಕಿ ರವರು 1980 ಕ್ಕೂ ಮೊದಲು ಖಾಮ್ ಹೋರಾಟ (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ)ದ ಮೂಲಕ ರಾಜಕೀಯ ಆರಂಭಿಸಿ ಗುಜರಾತ್ ನ ಪ್ರಭಾವಿ ರಾಜಕಾರಣಿ ಎನಿಸಿಕೊಂಡಿದ್ದರು.

ನಾಲ್ಕು ಬಾರಿ ಗುಜರಾತ್ ನ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಭಾರತದ ವಿದೇಶಾಂಗ ಖಾತೆ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

- Advertisement -

Related news

error: Content is protected !!