Saturday, April 20, 2024
spot_imgspot_img
spot_imgspot_img

ಆಸ್ಪತ್ರೆಯಲ್ಲಿ ರೋಗಿಯ ಮೈಮೇಲೆ ಬೆಂಕಿ ಹಚ್ಚಿದ ಆರೋಪಿ ಅಂದರ್!

- Advertisement -G L Acharya panikkar
- Advertisement -

ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿ ಈ ಹಿಂದೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದ ಪರಿಣಾಮ ಆತ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುದ್ಧಿ ಮೂಲಗಳ ಪ್ರಕಾರ, ಸಂತ್ರಸ್ತ ದಾಮೋದರ್ ಕೋರಿ ಈಗ ಸಾಗರ್ ಜಿಲ್ಲೆಯ ಬುಂದೇಲ್ ಖಂಡ್ ವೈದ್ಯಕೀಯ ಕಾಲೇಜಿನಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದೆ.

ಸಿಸಿಟಿವಿ ಫೂಟೇಜ್ ನಲ್ಲಿ ಸೆರೆಯಾದ ದೃಶ್ಯದಲ್ಲಿ ಆರೋಪಿ ಮಿಲನ್ ರಜಾಕ್ ಆಸ್ಪತ್ರೆಯ ಆವರಣದ ಸುತ್ತಲೂ ಲೈಟರ್ (ಬೆಂಕಿ ಹೊತ್ತಿಸುವ) ಹಿಡಿದು ಓಡಾಡುತ್ತಿರುವುದು ಪತ್ತೆಯಾಗಿದೆ. ನಂತರ ಆತ ಮಲಗಿದ್ದ ಕೋರಿ ಬಳಿ ತೆರಳಿ ಪೆಟ್ರೋಲ್ ಸುರಿದು ಲೈಟರ್ ನಿಂದ ಬೆಂಕಿ ಹಚ್ಚಿದ್ದ. ಬೆಂಕಿ ಹೊತ್ತಿಕೊಂಡ ನಂತರ ರೋಗಿ ದಾಳಿಕೋರನ ಬೆನ್ನಟ್ಟಿ ಓಡಿ ಬರುತ್ತಿರುವ ದೃಶ್ಯ ಕೂಡಾ ಸಿಸಿಟಿವಿಯಲ್ಲಿ ದಾಖಲಾಗಿದೆ.

ಮಿಲನ್ ರಜಾಕ್ ಆಸ್ಪತ್ರೆಯೊಳಗೆ ಬಂದು ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ದಾಮೋದರ್ ಕೋರಿ ಹೇಳಿಕೆ ನೀಡಿರುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಕುಶ್ವಾಹ್ ತಿಳಿಸಿದ್ದು, ಮಿಲನ್ ರಜಾಕ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307ರ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ಗೋಪಾಲ್ ಗಂಜ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!