Saturday, June 27, 2026
spot_imgspot_img
spot_imgspot_img

ಮಡಿಕೇರಿ: ಕಗ್ಗೋಡ್ಲು ಗೋಹತ್ಯೆ ಪ್ರಕರಣ; ಓರ್ವ ಆರೋಪಿಯ ಬಂಧನ, ಉಳಿದ ಆರೋಪಿಗಳಿಗಾಗಿ ಶೋಧ

- Advertisement -
- Advertisement -

ಮಡಿಕೇರಿ: ಕಗ್ಗೋಡ್ಲುವಿನ ಕಾಫಿ ಎಸ್ಟೇಟ್ ಒಳಭಾಗದಲ್ಲಿ ಹಸುವನ್ನು ಗುಂಡಿಕ್ಕಿ ಕೊಂದು ಮಾಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ನಾಪೋಕ್ಲು ಕೊಳಕೇರಿ ಗ್ರಾಮದ ಆಶಿಕ್(26) ಎಂಬಾತನೇ ಬಂಧಿತ ಆರೋಪಿ. ಇತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ.

ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದ ಸಂದರ್ಭ ಒಂದು ಕಾರು ಕೂಡ ಪತ್ತೆಯಾಗಿದ್ದು, ಅದರ ಬಗ್ಗೆಯೂ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!