Sunday, May 19, 2024
spot_imgspot_img
spot_imgspot_img

ಮ್ಯಾಗಿ ಪ್ರಿಯರಿಗೆ ಬಿಗ್ ಶಾಕ್; ತನ್ನ ಉತ್ಪನ್ನಗಳ ಗುಣಮಟ್ಟದ ಕುರಿತು ಸತ್ಯಾಂಶ ಹೊರ ಹಾಕಿದ ನೆಸ್ಲೆ ಕಂಪನಿ!

- Advertisement -G L Acharya panikkar
- Advertisement -

ನವದೆಹಲಿ: ಹಿರಿ- ಕಿರಿಯರೆನ್ನದೇ ಎಲ್ಲರನ್ನು ಸೆಳೆಯುತ್ತಿದ್ದ ಫಾಸ್ಟ್ ಫುಡ್ ಮ್ಯಾಗಿ ಪ್ರಿಯರಿಗೆ ಈಗ ಮತ್ತೊಮ್ಮೆ‌ ಶಾಕ್ ಎದುರಾಗಿದೆ. ತನ್ನ ಬಹುತೇಕ ಉತ್ಪನ್ನಗಳು ಆಹಾರದ ನೀರಿಕ್ಷಿತ ಗುಣಮಟ್ಟವನ್ನು ಹೊಂದಿಲ್ಲ ಎಂದು ಸ್ವತಃ ನೆಸ್ಲೆ ಕಂಪನಿ ಒಪ್ಪಿಕೊಂಡಿದೆ.

ಮ್ಯಾಗಿ‌ ನ್ಯೂಡಲ್ಸ್, ಕಿಟ್ ಕ್ಯಾಟ್, ನೆಸ್ ಕೆಫೆ ಸೇರಿದಂತೆ ವಿವಿಧ ಆಹಾರ ಉತ್ಪನ್ನ ತಯಾರಿಸುವ ನೆಸ್ಲೇ ಕಂಪನಿ, ಆಂತರಿಕ ದಾಖಲೆ ಯಲ್ಲಿ ತಾನು‌ ನೀರಿಕ್ಷಿತ ಗುಣಮಟ್ಟ ಹೊಂದಿಲ್ಲ ಎಂದು ಹೇಳಿಕೊಂಡಿದೆ.

ಮ್ಯಾಗಿ ಸೇರಿದಂತೆ ತನ್ನ ಉತ್ಪನ್ನಗಳು ಆಹಾರ ಪಾನಿಯಗಳ ಪೋರ್ಟ್ ಪೊಲಿಯೋದಿಂದ ಶೇಕಡಾ 70 ರಷ್ಟು ಆರೋಗ್ಯದ ಗುಣಮಟ್ಟವನ್ನು‌ ಹೊಂದಿದೆ ಎಂದು ವಾಗ್ದಾನ ಮಾಡುವುದಿಲ್ಲ ಎಂದು ಹೇಳಿದೆ. ನಾವು ಎಷ್ಟೇ ನವೀಕರಿಸಿದರೂ ನಮ್ಮ ಕೆಲ ಉತ್ಪನ್ನಗಳು ಎಂದಿಗೂ ಆರೋಗ್ಯಕರವಾಗಿರುವುದಿಲ್ಲ ಎಂದು ಹೇಳಿದೆ.

ಅಲ್ಲದೇ ಇತ್ತೀಚಿಗೆ ಬ್ರಿಟನ್ ಪತ್ರಿಕೆಯೊಂದು ವರದಿ ಪ್ರಕಟಿಸಿದ್ದು, ಇದರಲ್ಲಿ ದಾಖಲೆಗಳ ಸಮೇತ ನೆಸ್ಲೆ ಆಹಾರ ಉತ್ಪನ್ನಗಳ ಗುಣಮಟ್ಟದ ಕುರಿತು ಉಲ್ಲೇಖಿಸಿದೆ.

ಸಾಕುಪ್ರಾಣಿಗಳ ಆಹಾರ ಹಾಗೂ ಸ್ಪೆಶಲೈಸ್ಡ್ ಮೆಡಿಕಲ್ ನ್ಯೂಟ್ರಿಶಿ ಯನ್ ಹೊರತು ಪಡಿಸಿ ನೆಸ್ಲೆ‌ ತಯಾರಿಸುವ ಶೇಕಡಾ 37 ರಷ್ಟು ಉತ್ಪನ್ನಗಳು ಮಾತ್ರ‌ 3.5 ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ.

ಈ ಹಿಂದೆಯೂ ಮ್ಯಾಗಿಯಲ್ಲಿ ಮಕ್ಕಳ ದೈಹಿಕ ಅಂಗವಿಕಲತೆ, ಮೂತ್ರ ಪಿಂಡಗಳ ವೈಫಲ್ಯ ಸೇರಿದಂತೆ ಹಲವು ಕಾಯಿಲೆಗೆ ಕಾರಣ ವಾಗುವ ಸೀಸ್ ದ‌ ಅಂಶವಿದೆ ಎಂಬ ಸಂಗತಿಯನ್ನು ನೆಸ್ಲೇ ನ್ಯಾಯಲಯದ ಮುಂದೇ ಒಪ್ಪಿಕೊಂಡಿತ್ತು.

- Advertisement -

Related news

error: Content is protected !!