Friday, May 17, 2024
spot_imgspot_img
spot_imgspot_img

ಕೊರೊನಾದ ಕರಿ ನೆರಳು -ಸರಳ ಗಣರಾಜ್ಯೋತ್ಸವಕ್ಕೆ ನಿರ್ಧಾರ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾದ ಕರಿ ನೆರಳು ಈ ವರ್ಷ ರಾಷ್ಟ್ರಹಬ್ಬ ಗಣರಾಜ್ಯೋತ್ಸವದ ಮೇಲೂ ಬಿದ್ದಿದೆ. ಕೊರೊನಾ ಕಾರಣದಿಂದಾಗಿ ಈ ಬಾರಿ ಗಣರಾಜ್ಯೋತ್ಸವ ಪರೇಡ್ ಹಿಂದಿನದಕ್ಕಿಂತ ಸ್ವಲ್ಪ ಭಿನ್ನವಾಗಿರಲಿದೆ.

ರಾಜಪಥ್​​​ನಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿತವಾಗಲಿದೆ. ಪ್ರೇಕ್ಷಕರ ಸಂಖ್ಯೆಯನ್ನು 1 ಲಕ್ಷದ 15 ಸಾವಿರದಿಂದ 25 ಸಾವಿರಕ್ಕೆ ಇಳಿಸಲಾಗಿದೆ. ಅಲ್ಲದೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಬಾರಿ ಗಣರಾಜ್ಯೋತ್ಸವ ಪರೇಡ್​ಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪರೇಡ್​​ನ ಹಾದಿ ಕೂಡ ಚಿಕ್ಕದಾಗಿರಲಿದ್ದು, ಪಥಸಂಚಲನದಲ್ಲಿ ಪಾಲ್ಗೊಳ್ಳುವ ಕಾಂಟಿಂಜೆಂಟ್ಸ್​​ ಪ್ರಮಾಣವನ್ನ ಇಳಿಕೆ ಮಾಡಲಾಗಿದೆ.

ಈ ಹಿಂದೆ ಸುಮಾರು 8.2 ಕಿ.ಮೀ ದೂರ ಪಥಸಂಚಲನ ನಡೆಯುತ್ತಿತ್ತು. ಆದರೆ ಈ ವರ್ಷ ಅದನ್ನು 3.3 ಕಿ.ಮೀಗೆ ಇಳಿಸಲಾಗಿದೆ. ವಿಜಯ್​ ಚೌಕ್​ನಿಂದ ಶುರುವಾಗಲಿರುವ ಪರೇಡ್​, ನ್ಯಾಷನಲ್ ಸ್ಟೇಡಿಯಂ ಬಳಿ ಕೊನೆಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ ಬರುವ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ, ಮಾಸ್ಕ್​ ಧರಿಸುವಂತೆ ನಿಗಾ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!