Tuesday, June 25, 2024
spot_imgspot_img
spot_imgspot_img

ಮಹಾರಾಷ್ಟ್ರದಲ್ಲಿ ಆಗಸ್ಟ್ 31ರವರೆಗೆ ಲಾಕ್ ಡೌನ್ ಮುಂದೂಡಿಕೆ

- Advertisement -G L Acharya panikkar
- Advertisement -

ಮುಂಬೈ: ದೇಶದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರಿರುವ ರಾಜ್ಯ ಮಹಾರಾಷ್ಟ್ರ. ಈ ರಾಜ್ಯವನ್ನು ಕೊರೊನಾ ಬಿಟ್ಟು ಬಿಡದೇ ಕಾಡುತ್ತಿದೆ. ಸೋಂಕಿತರ ಸಂಖ್ಯೆ 4 ಲಕ್ಷ ಗಡಿ ದಾಟಿದೆ. ಈ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಆಗಸ್ಟ್ 31ರ ಮಧ್ಯರಾತ್ರಿಯವರೆಗೆ ಲಾಕ್ ಡೌನ್ ಮುಂದೂಡಿ ಆದೇಶ ಹೊರಡಿಸಿದೆ.

ಕೇಂದ್ರದ ಅನ್ ಲಾಕ್ 3 ಮಾರ್ಗಸೂಚಿಗಳನ್ನು ಘೋಷಿಸಿದ ನಂತರ ಈ ಪ್ರಕಟಣೆ ಬಂದಿದೆ. ಮಹಾರಾಷ್ಟ್ರ ಸರ್ಕಾರದ ಆದೇಶದ ಪ್ರಕಾರ, ಸಿನಿಮಾ ಮಂದಿರ,ರೆಸ್ಟೋರೆಂಟ್ ,ಪುಟ್ ಕೋರ್ಟ್ ಗಳಿಲ್ಲದ ಮಾಲ್ ಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳು ಆಗಸ್ಟ್ 5ರಿಂದ ಬೆಳಿಗ್ಗೆ 9ರಿಂದ ಸಂಜೆ 7 ಗಂಟೆ ವರೆಗೆ ಕಾರ್ಯನಿರ್ವಹಿಸಿಲಿದೆ. ಆದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸೂಚನೆ ನೀಡಿದೆ.

ಈ ಮೊದಲು ಅನುಮತಿಸಲಾದ ಸೆಲೂನ್ ಗಳ ಪ್ರಸ್ತುತ ಕ್ರಮದಲ್ಲಿ ಮುಕ್ತವಾಗಿರುತ್ತದೆ. ಅಗತ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ತೆರೆದಿರುತ್ತದೆ. ಕೆಲಸದ ಸ್ಥಳಕ್ಕೆ ಚಲಿಸಲು ಮತ್ತು ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಮನೆಯಿಂದ ಹೊರಬರಲು ಸೂಚಿಸಲಾಗಿದೆ. ಶಾಪಿಂಗ್ , ಹೊರಾಂಗಣ ವ್ಯಾಯಾಮಗಳ ಚಟುವಟಿಕೆಗಳಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬಹುದು ಆದೇಶದಲ್ಲಿ ತಿಳಿಸಲಾಗಿದೆ.

ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ 9,211 ಹೊಸ ಪ್ರಕರಣಗಳು ದಾಖಲಾದ ನಂತರ ಮಹಾರಾಷ್ಟ್ರದ ಒಟ್ಟಾರೆ ಕೋವಿಡ್ -19 ಪ್ರಕರಣ 4 ಲಕ್ಷ ದಾಟಿದೆ. 2,39,755 ಮಂದಿ ಚೇತರಿಸಿಕೊಂಡಿದ್ದು, 1,46,129 ಸಕ್ರಿಯ ಪ್ರಕರಣಗಳು ಮತ್ತು 14,463 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

- Advertisement -

Related news

error: Content is protected !!