Saturday, May 4, 2024
spot_imgspot_img
spot_imgspot_img

ಕಾಂಗ್ರೆಸ್‌ ಪಕ್ಷಕ್ಕೆ ಶಾಕ್‌ ನೀಡಿದ ಐಟಿ ಇಲಾಖೆ ; ಪಕ್ಷದ ಬ್ಯಾಂಕ್‌ ಅಕೌಂಟ್‌ನಿಂದ 65 ಕೋಟಿ ರೂ. ವಿತ್​ಡ್ರಾ ಮಾಡಿಕೊಂಡ ಐಟಿ ಇಲಾಖೆ

- Advertisement -G L Acharya panikkar
- Advertisement -

ಕಾಂಗ್ರೆಸ್‌ ಪಕ್ಷ ಬಾಕಿ ಉಳಿಸಿಕೊಂಡಿದ್ದ 115 ಕೋಟಿ ರೂಪಾಯಿ ಆದಾಯ ತೆರಿಗೆಯಲ್ಲಿ 65 ಕೋಟಿ ರೂಪಾಯಿಯನ್ನ ವಸೂಲಿ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮೂಲಗಳ ಪ್ರಕಾರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ ಎಂಬ ಹೆಸರಿನ ಬ್ಯಾಂಕ್​ ಖಾತೆಯಿಂದ ಈ ಹಣವನ್ನು ಯಶಸ್ವಿಯಾಗಿ ವಸೂಲಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಖಾತೆಗಳಿಗೆ ಇಲಾಖೆಯು ಸ್ವಾದೀನತೆ ಹಕ್ಕನ್ನು ವಿಧಿಸಿದ ನಂತರ ಹಣವನ್ನು ವಸೂಲಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಪಕ್ಷದ ಖಾತೆಗಳಿಗೆ ಇಲಾಖೆ ಸ್ವಾಧೀನತೆ ಹೇರಿದ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಯಿಂದ ವಸೂಲಾತಿ ನಡೆದಿದೆ. ಸ್ವಾದೀನತೆ ಹಕ್ಕನ್ನ ಸಾಮಾನ್ಯವಾಗಿ ಒಂದು ಖಾತೆಯಿಂದ ಪಾವತಿಸಬೇಕಾದ ಯಾವುದೇ ಶುಲ್ಕ ಅಥವಾ ಸಾಲವನ್ನು ನಿಗಧಿತ ಸಮಯದಲ್ಲಿ ಪಾವತಿ ಮಾಡದಿದ್ದರೆ, ಅದನ್ನು ಮರುಪಡೆಯಲು ಜಾರಿಗೊಳಿಸಲಾಗುತ್ತದೆ. ಕಾಂಗ್ರೆಸ್ ಪಕ್ಷದ ಖಾತೆಯಲ್ಲಿ 115 ಕೋಟಿ ರೂಪಾಯಿಗಳ ಸ್ವಾದೀನತೆಗಾಗಿ ಆದಾಯ ತೆರಿಗೆ ಇಲಾಖೆಯು ಮಾರ್ಕ್ ಮಾಡಿದೆ ಎಂದು ತಿಳಿದುಬಂದಿದೆ.

ಐಟಿ ಇಲಾಖೆಯ ವಸೂಲಾತಿ ಕ್ರಮವನ್ನು ಕಾಂಗ್ರೆಸ್​ ಖಜಾಂಚಿ ಅಜಯ್ ಮಾಕೆನ್​ ಟೀಕಿಸಿದ್ದು, ಇದನ್ನು ಪ್ರಜಾಪ್ರಭುತ್ವದ ವಿರೋಧಿ ನಡೆ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಪಕ್ಷ ಐಟಿ ಇಲಾಖೆಯ ಕ್ರಮವನ್ನು ವಿರೋಧಿಸಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!