Sunday, May 5, 2024
spot_imgspot_img
spot_imgspot_img

ಮೊದಲ ಬಾರಿಗೆ ಋತುಮತಿಯಾದ ತಂಗಿ; ರಕ್ತ ನೋಡಿ ಸಂಶಯಗೊಂಡು ಭೀಕರವಾಗಿ ಹತ್ಯೆಗೈದ ಅಣ್ಣ

- Advertisement -G L Acharya panikkar
- Advertisement -

ಸಹೋದರನೊಬ್ಬ ಅತ್ತಿಗೆ ಕುಮ್ಮಕ್ಕಿನಿಂದ ಹಾಗೂ ತಪ್ಪು ಗ್ರಹಿಕೆಯಿಂದ ತಂಗಿಯನ್ನೇ ಕೊಲೆಗೈದ ಘಟನೆ ನಡೆದಿದೆ. 12 ವರ್ಷದ ಬಾಲಕಿ ಮೊದಲ ಬಾರಿಗೆ ಋತುಮತಿಯಾಗಿದ್ದಳು, ಅದಕ್ಕೆ ಸಂತೋಷಪಡುವುದು ಬಿಟ್ಟು, ತಂಗಿ ಯಾರೊಂದಿಗೋ ಲೈಂಗಿಕ ಸಂಬಂಧ ಹೊಂದಿರಬಹುದು ಎಂದು ಶಂಕಿಸಿ ಮೂರು ದಿನಗಳ ಕಾಲ ಥಳಿಸಿ ಹತ್ಯೆ ಮಾಡಲಾಗಿದೆ. ಈ ಘಟನೆ ಮಹಾರಾಷ್ಟ್ರದ ಉಲ್ಲಾಸ್ ನಗರದಲ್ಲಿ ನಡೆದಿದೆ.

ಇದೆಲ್ಲಕ್ಕೂ ಆ ಬಾಲಕಿಗೆಯ ಅತ್ತಿಗೆಯೇ ಕಾರಣ ಎನ್ನಲಾಗಿದೆ. ಬಾಲಕಿಯ ರಕ್ತಸ್ರಾವಕ್ಕೆ ಕಾರಣ ಕೇಳಿದಾಗ ಸರಿಯಾಗಿ ವಿವರಿಸುವ ಬದಲು ಕುಮ್ಮಕ್ಕು ಕೊಟ್ಟು, ಆಕೆಯ ಮೇಲೆ ಕೋಪ ಬರುವಂತೆ ಮಾಡಿದ್ದಳು. ಇದರಿಂದ ಕೋಪಗೊಂಡ ಅಣ್ಣ ತಂಗಿಯನ್ನು ಮನಸೋ ಇಚ್ಛೆ ತಳಿಸಿದ್ದಾನೆ ಎನ್ನಲಾಗಿದ್ದು ಕೊಲೆಗೈದ ಅಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.

ಥಳಿಸಿ ಕೊಲೆಗೈದ ಬಳಿಕ ಉಲ್ಲಾಸ್​ನಗರದ ಆಸ್ಪತ್ರೆಗೆ ಕೊಂಡೊಯ್ದಾಗ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮುಖ, ಬೆನ್ನು, ಕತ್ತಿನ ಮೇಲೆ ಗಾಯದ ಗುರುತುಗಳಿದ್ದವು, ಅತ್ಯಾಚಾರ ನಡೆದಿದೆಯೇ ಎಂದು ಪರೀಕ್ಷೆಗೊಳಪಡಿಸಿದಾಗ ಆಕೆ ಮೊದಲ ಬಾರಿಗೆ ಋತುಮತಿಯಾಗಿದ್ದಳು ಎಂಬುದು ತಿಳಿದುಬಂದಿದೆ. ಪೊಲೀಸರು ಅಣ್ಣನ ವಿರುದ್ಧ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕಿ ತನ್ನ ಅಣ್ಣ ಅತ್ತಿಗೆಯೊಂದಿಗೆ ವಾಸಿಸುತ್ತಿದ್ದಳು, ಅಪ್ಪ, ಅಮ್ಮ ಬೇರೆ ಊರಿನಲ್ಲಿದ್ದರು. ಅಣ್ಣ ಸೆಕ್ಯುರಿಟಿ ಗಾರ್ಡ್​ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.

- Advertisement -

Related news

error: Content is protected !!