Saturday, April 27, 2024
spot_imgspot_img
spot_imgspot_img

ಮಜಿ ವೀರಕಂಬ ಪ್ರಾಥಮಿಕ ಶಾಲೆಯಲ್ಲಿ ಗುಬ್ಬಚ್ಚಿ ಗೂಡು ಕಾಯ೯ಕ್ರಮ

- Advertisement -G L Acharya panikkar
- Advertisement -

ವೀರಕಂಭ: ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಆದರೆ ಮಾನವನು ತನ್ನ ಸ್ವಾಥ೯ಕ್ಕಾಗಿ ಯಾವ ಜೀವ ಜಂತುಗಳ ಬಗ್ಗೆಯೂ ಯೋಚಿಸದೇ ತನಗೆ ಬೇಕಾದ ಹಾಗೇ ಮನಬಂದಂತೆ ಹಾಳು ಮಾಡುತ್ತಿದ್ದಾನೆ. ಇದರಿಂದ ಪ್ರಕೃತಿಯು ತನ್ನ ಸಮತೋಲನ ಕಳೆದುಕೊಂಡು ನಮಗೆ ತಿರುಗೇಟು ಕೊಡುವುದರ ಹಿಂದೆ ತಾನೇ ಕಾರಣನಾಗಿರುವುದನ್ನೂ ಮರೆಯುತ್ತಿದ್ದಾನೆ.

ಇನ್ನಾದರೂ ನಮ್ಮ ಹಾಗೆ ಇತರ ಜೀವಿಗಳಿಗೂ ಬದುಕಲು ನಾವು ಪೂರಕವಾದ ವಾತಾವರಣ ನೀಡೋಣ ಎಂಬುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬದಲ್ಲಿ ನಡೆದ ಗುಬ್ಬಚ್ಚಿ ಗೂಡು ಕಾಯ೯ಕ್ರಮದಲ್ಲಿ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿಯವರು ಮಾತನಾಡಿದರು.


ಗುಬ್ಬಚ್ಚಿ ಗೂಡು ಕಾಯ೯ಕ್ರಮದ ರುವಾರಿಯಾದ ಶ್ರೀಯುತ ನಿತ್ಯಾನಂದ ಶೆಟ್ಟಿಯವರು ಶಾಲಾ ವಿದ್ಯಾರ್ಥಿಗಳಿಗೆ “ಪಕ್ಷಿ ಸಂಕುಲಗಳ ಅಳಿವು ಉಳಿವಿನಲ್ಲಿ ನನ್ನ ಪಾತ್ರ” ವಿಚಾರವಾಗಿ ಪ್ರಬಂಧ ಸ್ಪರ್ಧೆ ನಡೆಸಿ ಉತ್ತಮ ಬರಹಗಳಿಗೆ ಪ್ರಮಾಣ ಪತ್ರ ಹಾಗೂ ಪದಕಗಳನ್ನು ವಿತರಿಸಿದರು. ಬಳಿಕ ಬಿದಿರಿನ ಹಕ್ಕಿಗೂಡುಗಳನ್ನು ಪರಿಚಯಿಸಿ ಹಕ್ಕಿ ಗಳ ಆಶ್ರಯ ನಿವ೯ಹಣೆಯಲ್ಲಿ ನಮ್ಮ ಪಾತ್ರ ದ ಕುರಿತು ವಿವರಿಸಿದರು. ಹಾಗೂ ಆಸಕ್ತಿ ದಾಯಕರಿಗೆ ಗೂಡುಗಳನ್ನು ವಿತರಿಸಿದರು.

ಬಳಿಕ ಶಾಲೆಯಲ್ಲಿ ಗೂಡುಗಳನ್ನು ಕಟ್ಟಲಾಯಿತು. ಕಾಯ೯ಕ್ರಮದಲ್ಲಿ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕಿ ಸಂಗೀತ ಶಮ೯ರವರು ಸ್ವಾಗತಿಸಿ ನಿರೂಪಿ‌ಸಿದರು.

- Advertisement -

Related news

error: Content is protected !!