Thursday, May 16, 2024
spot_imgspot_img
spot_imgspot_img

ಮಜಿ ವೀರಕಂಭ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ: ಶಿಕ್ಷಣವು ನಿಂತ ನೀರಾಗಬಾರದು ನಿರಂತರವಾಗಿ ಮುಂದುವರಿದು ವಿದ್ಯೆಯು ಪ್ರಗತಿಗೆ ನಾಂದಿಯಾಗಬೇಕು .ಶಿಕ್ಷಣವು ಎಷ್ಟೇ ಪಡೆದಿದ್ದರೂ ಗುರುವಿಗೆ ಗೌರವ ನೀಡುವುದೇ ಸಂಸ್ಕಾರ ಆಗಿರುತ್ತದೆ. ಕಲಿತ ಶಾಲೆ ನಮ್ಮ ಬದುಕಿನ ದಾರಿಯನ್ನು ಕೊಡುತ್ತವೆ ಎಂಬುದಾಗಿ ವೀರಕಂಭ ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ನಿಶಾಂತ್ ರವರು ದ.ಕ ಜಿಲ್ಲಾ ಪಂಚಾಯತ್ ಹಿ.ಪ್ರಾ.ಶಾಲೆ ಮಜಿ ವೀರಕಂಭ ಇಲ್ಲಿನ ಎಂಟನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ವಿಧ್ಯಾಥಿ೯ಗಳಿಗೆ ಶುಭಹಾರೈಸಿದರು.

ವಿಧ್ಯೆಯೇ ವಿನಯಕ್ಕೆ ಭೂಷಣ ಆಗಿದೆ ಕಲಿಕಾಥಿ೯ಯು ಎಷ್ಟು ವಿನಯಶೀಲ ನಾಗಿರುತ್ತನೋ ಅಷ್ಟು ಉತ್ತಮ ವಿದ್ಯಾರ್ಥಿ ಆಗುತ್ತಾನೆ ತಮ್ಮ ಮುಂದಿನ ವಿದ್ಯಾಭ್ಯಾಸ ಹಾದಿ ಸುಗಮವಾಗಿ ಸಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಂಚಾಯತಿನ ಅಧ್ಯಕ್ಷ ದಿನೇಶ್ ರವರು ಶುಭ ಹಾರೈಸಿದರು.

ಶಿಕ್ಷಕಿಯರಾದ ಶಕುಂತಳಾ ಮತ್ತು ಸಂಗೀತ ಶಮ೯ರವರು ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕಾಗಿ ಬೇರೆ ಶಾಲೆಗೆ ಹೋದಾಗ ಯಾವ ರೀತಿ ಶಿಸ್ತಿನಿಂದ ಇರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿ ಶುಭ ಹಾರೈಸಿದರು. ಎಂಟನೇ ತರಗತಿಯ ವಿದ್ಯಾರ್ಥಿಗಳು ತಮ್ಮ ನೆನಪಿಗೋಸ್ಕರ ಶಾಲೆಗೆ ಕಪಾಟನ್ನು ಕೊಡುಗೆಯಾಗಿ ನೀಡಿದ್ದು ಅದರದ ಬೀಗದ ಕೀಯನ್ನು ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.

ಕಾಯ೯ಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಮೀನಾಕ್ಷಿ , ಎಸ್ ಡಿ ಎಂ ಸಿ ಉಪಾಧ್ಯಕ್ಷೆ ವಿಜಯಾ ಶೇಖರ್, ಶಾಲಾ ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿಗಳು, ಹಿರಿಯ ವಿದ್ಯಾರ್ಥಿಗಳು, ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಮುಖ್ಯ ಶಿಕ್ಷಕ ನಾರಾಯಣ ಪೂಜಾರಿಯವರು ಸ್ವಾಗತಿಸಿ ಶಿಕ್ಷಕಿ ಸಂಗೀತ ಶಮ೯ರವರು ವಂದಿಸಿ ಕಾಯ೯ಕ್ರಮ ನಿವ೯ಹಿಸಿದರು.

- Advertisement -

Related news

error: Content is protected !!