Saturday, June 13, 2026
spot_imgspot_img
spot_imgspot_img

ವಿಟ್ಲ: ಕೋವಿಡ್ ಕಾರ್ಯಪಡೆಯ ಬಗ್ಗೆ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಸಭೆ!

- Advertisement -
- Advertisement -

ವಿಟ್ಲ: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವಿಚಾರಿಸಿ ಕೋವಿಡ್ ಕಾರ್ಯಪಡೆಯ ಬಗ್ಗೆ ಮಾಹಿತಿ ನೀಡುವ ಕಾರ್ಯದಲ್ಲಿ ಕೆಲವು ದಿನಗಳಿಂದ ತೊಡಗಿದ್ದು, ಇಂದು ಇಡ್ಕಿದು ಆರೋಗ್ಯ ಕೇಂದ್ರದಲ್ಲಿ ತುರ್ತು ಸಭೆ ನಡೆಸಲಾಗಿದೆ.

ಪೊಲೀಸರಿಗೆ, ಆಶಾಕಾರ್ಯಕರ್ತೆಯರಿಗೆ, ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಪಂಚಾಯತ್ ಸಿಬ್ಬಂದಿಗಳಿಗೆ ಕೋವಿಡ್ ಕಾರ್ಯಪಡೆಯ ಕುರಿತು ಮಾಹಿತಿ ನೀಡಿದ್ದು, ಹಾಗೆಯೇ ಅವರೆಲ್ಲರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಚಾರಿಸಿದರು.

ಇಡ್ಕಿದು ಗ್ರಾಮದಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗಿದ್ದು ಇದರ ಬಗ್ಗೆ ಆರೋಗ್ಯಧಿಕಾರಿ ದೀಪಪ್ರಭು ಹಾಗೂ ವೈದ್ಯಾಧಿಕಾರಿ ಶಶಿಕಲಾ ಮಾಹಿತಿ ನೀಡಿದರು.

- Advertisement -

Related news

error: Content is protected !!