Friday, April 26, 2024
spot_imgspot_img
spot_imgspot_img

ಕಕ್ಕುಂಜೆಯ ಮಾಲಾ ಅಡಿಗ ಅಮೇರಿಕಾ ಅಧ್ಯಕ್ಷರ ಪತ್ನಿಯ ನೀತಿ ನಿರ್ದೇಶಕಿ!!

- Advertisement -G L Acharya panikkar
- Advertisement -

ಬೆಂಗಳೂರು: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೊ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಅವರ ಮುಖ್ಯ ನೀತಿ ನಿರ್ದೇಶಕರಾಗಿ ಮಾಲಾ ಅಡಿಗ ನೇಮಕವಾಗಿದ್ದಾರೆ.

ಮಾಲಾ ಅಡಿಗ ಅವರು ಮೂಲತ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಬಳಿಯ ಕಕ್ಕುಂಜೆ ಯವರಾಗಿದ್ದಾರೆ. ಅವರ ನಿಕಟ ಸಂಬಂಧಿಕರು ಕಕ್ಕುಂಜೆಯಲ್ಲಿಯೇ ವಾಸವಾಗಿದ್ದಾರೆ. ಅವರ ತಂದೆ ಡಾ . ರಮೇಶ್ ಅಡಿಗ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿ ಪಡೆದು ಅಮೆರಿಕಕ್ಕೆ ತೆರಳಿದ್ದರು. ಬಳಿಕ ಅಲ್ಲಿಯೇ ನೆಲೆಸಿದರು.

2019 ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಲಾ ಅಡಿಗ ಮತ್ತು ಅವರ ಕುಟುಂಬದ ಸದಸ್ಯರು ಬೆಂಗಳೂರಿಗೆ ಬಂದಿದ್ದರು.

ಏಳು ವರ್ಷಗಳ ಹಿಂದೆ ಮಾಲಾ ಅಡಿಗ ಅವರು ಹುಟ್ಟೂರು ಕಕ್ಕುಂಜೆಗೆ ಭೇಟಿ ನೀಡಿ ಪೂಜೆಯಲ್ಲಿ ಭಾಗವಹಿಸಿದ್ದರು. ಮಾಲಾ ಅಡಿಗ ಅವರ ಸಾಧನೆ ಹುಟ್ಟೂರಿನಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!