Sunday, June 29, 2025
spot_imgspot_img
spot_imgspot_img

ಗರ್ಭಿಣಿಯಾಗಿದ್ದ ಮಲಯಾಳಂ ಕಿರುತೆರೆ ನಟಿ ಡಾ.ಪ್ರಿಯಾ ಹೃದಯಾಘಾತಕ್ಕೆ ಬಲಿ; ನವಜಾತ ಶಿಶುವಿಗೆ ಐಸಿಯುನಲ್ಲಿ ಚಿಕಿತ್ಸೆ

- Advertisement -
- Advertisement -
vtv vitla

ಮಲಯಾಳಂ ಕಿರುತೆರೆ ನಟಿ ಡಾ.ಪ್ರಿಯಾ (35) ಕಾರ್ಡಿಯಾಕ್ ಅರೆಸ್ಟ್​ನಿಂದ ಸಾವನ್ನಪ್ಪಿದ್ದಾರೆ. ಅವರು 8 ತಿಂಗಳ ಗರ್ಭಿಣಿ ಕೂಡ ಆಗಿದ್ದು, ಶಿಶುವನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಿಯಾ ನಿಧನದ ಬಗ್ಗೆ ನಟ ಕಿಶೋರ್ ಸತ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನ್ಯೂ ಬಾರ್ನ್​​ ಬೇಬಿ ಆಸ್ಪತ್ರೆ ಐಸಿಯುನಲ್ಲಿ ಇರೋದನ್ನೂ ಅವರೇ ಖಚಿತಪಡಿಸಿದ್ದಾರೆ. ಪ್ರಿಯಾಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ತಮ್ಮ ದಿನನಿತ್ಯದ ಚೆಕಪ್ ಗಾಗಿ ಆಸ್ಪತ್ರೆಗೆ ಬಂದಿದ್ದ ಅವರಿಗೆ ಹೃದಯ ಸ್ತಂಭನವಾಗಿದೆ. ಕುಟುಂಬಕ್ಕೆ ಹೇಗೆ ಸಾಂತ್ವಾನ ಹೇಳಲಿ ಎಂದು ತಿಳಿಯುತ್ತಿಲ್ಲ ಎಂದು ನಟ ಕಿಶೋರ್ ಸತ್ಯ ದುಃಖ ಹಂಚಿಕೊಂಡಿದ್ದಾರೆ.

ಪ್ರಿಯಾ ಅವರು ತಾಯಿ ಮತ್ತು ಗಂಡನನ್ನು ಅಗಲಿದ್ದಾರೆ. ಮಲಯಾಳಂ ಟೆಲಿವಿಷನ್ ಇಂಡಸ್ಟ್ರಿಯಲ್ಲಿ ಡಾ.ಪ್ರಿಯಾ ತುಂಬಾ ಜನಪ್ರಿಯತೆ ಗಳಿಸಿದ್ದರು. ವರದಿಗಳ ಪ್ರಕಾರ, ಮದುವೆಯಾದ ಬಳಿಕ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ ಪ್ರಿಯಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದರು.

- Advertisement -

Related news

error: Content is protected !!