Monday, April 29, 2024
spot_imgspot_img
spot_imgspot_img

ಕೋಲ್ಪೆ: ಗೂಡಂಗಡಿಯಿಂದ 15 ಸಾವಿರ ರೂ.ಮೌಲ್ಯದ ಸೊತ್ತು ಕಳವು..!

- Advertisement -G L Acharya panikkar
- Advertisement -

ಕೋಲ್ಪೆ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಗೂಡಂಗಡಿಯೊಂದರಿಂದ ಕಳ್ಳತನ ಮಾಡಿರುವ ಘಟನೆ ಕೊಣಾಲು ಗ್ರಾಮದ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಮುಂಭಾಗದಲ್ಲಿ ನಡೆದಿದೆ.

ಕೋಲ್ಪೆ ನಿವಾಸಿ ಮುಸ್ತಫಾ ಎಂಬವರ ಬದ್ರಿಯಾ ಸ್ಟೋರ್ ಗೂಡಂಗಡಿಯಲ್ಲಿ ಈ ಕಳ್ಳತನ ನಡೆದಿದೆ.

ಮುಸ್ತಫಾ ಅವರು ಮಾ.20ರಂದು ರಾತ್ರಿ 9 ಗಂಟೆ ವೇಳೆಗೆ ಅಂಗಡಿ ಬಂದ್ ಮಾಡಿ ಮನೆಗೆ ಹೋಗಿದ್ದು ಮಾ.21ರಂದು ಮುಂಜಾನೆ 3 ಗಂಟೆ ವೇಳೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅಂಗಡಿಯಲ್ಲಿದ್ದ 4 ಸಾವಿರ ನಗದು, ವಿಮಲ್, ಸ್ಟಾರ್, ಸಿಗರೇಟ್ ಸಹಿತ ಸುಮಾರು 15 ಸಾವಿರ ರೂ.ಮೌಲ್ಯದ ಸೊತ್ತು ಕಳವುಗೊಂಡಿರುವುದಾಗಿ ವರದಿಯಾಗಿದೆ. ಕಳ್ಳತನದ ಬಗ್ಗೆ ಮುಸ್ತಫಾ ಅವರು ಪೊಲೀಸರಿಗೆ ದೂರು ನೀಡಿದ್ದು ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!