Friday, June 19, 2026
spot_imgspot_img
spot_imgspot_img

ಬೆಳ್ತಂಗಡಿ: ಮರ ಕಡಿಯುವ ವೇಳೆ, ಕಟ್ಟಿಂಗ್ ಮೆಷಿನ್ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಮೃತ್ಯು..!

- Advertisement -
- Advertisement -

ಬೆಳ್ತಂಗಡಿ: ಮರ ಕಡಿಯುವ ವೇಳೆ, ಕಟ್ಟಿಂಗ್ ಮೆಷಿನ್ ಕೈ ತಪ್ಪಿ ಬಿದ್ದ ಪರಿಣಾಮ ಗರಗಸ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವಘಟನೆ ಬೆಳ್ತಂಗಡಿಯ ಸಾವ್ಯದಲ್ಲಿ ನಡೆದಿದೆ.

ಮೃತರನ್ನು ಸಾವ್ಯ ಗ್ರಾಮದ ಸಾವ್ಯ ಹೊಸಮನೆ ನಿವಾಸಿ ಪ್ರಶಾಂತ್ ಪೂಜಾರಿ (46) ಎಂದು ಗುರುತಿಸಲಾಗಿದೆ.

ಮನೆಗೆ ಕಟ್ಟಿಗೆ ಮಾಡುವ ಸಲುವಾಗಿ ಪ್ರಶಾಂತ್ ಅವರು ಸಹೋದರ ಪ್ರಮೋದ್ ಜೊತೆ ಸೇರಿ ಕಟ್ಟಿಂಗ್ ಮಿಷಿನ್ ಮೂಲಕ ಮರ ಕಡಿಯುತ್ತಿದ್ದರು. ಈ ವೇಳೆ ಮಿಷಿನ್ ಜೊತೆಗೆ ಪ್ರಶಾಂತ್ ಹಿಡಿತ ತಪ್ಪಿ ಕೆಳಕ್ಕೆ ಬಿದ್ದಿದ್ದು ಚಲನೆ ಸ್ಥಿತಿಯಲ್ಲಿ ಮಿಷಿನ್ ನ ಗರಗಸ ಆಕಸ್ಮಿಕವಾಗಿ ಕುತ್ತಿಗೆಗೆ ತಾಗಿ ಗಂಭೀರ ಗಾಯಗಳಾಗಿದೆ. ತಕ್ಷಣ ಸ್ಥಳೀಯ ಆಸ್ಪತೆಗೆ ದಾಖಲಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸಹೋದರ ಪ್ರಮೋದ್ ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Related news

error: Content is protected !!