Sunday, June 7, 2026
spot_imgspot_img
spot_imgspot_img

ಕಡಬ: ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಮೃತ್ಯು

- Advertisement -
- Advertisement -

ಕಡಬ: ವಿದ್ಯುತ್ ಶಾಕ್‌ನಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ವಳಕಡಮದಲ್ಲಿ ನಡೆದಿದೆ.

ವಳಕಡಮ ಕೆರೆಂತೆಲ್ ನಿವಾಸಿ ಬಾಬು ಮುಗೇರ ಮೃತ ವ್ಯಕ್ತಿ.

ಬಾಬು ಮುಗೇರ ಅವರು ಸಂಜೆ ವೇಳೆ ಮನೆಯಲ್ಲಿ ಟಾರ್ಚ್ ಚಾರ್ಜ್‌ಗೆ ಇಡುತ್ತಿದ್ದ ವೇಳೆ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ ಎಂದು ಹೇಳಲಾಗಿದೆ.
ಕೂಡಲೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!