Saturday, June 28, 2025
spot_imgspot_img
spot_imgspot_img

ಪ್ರೊಟೀನ್ ಶೇಕ್ ಗೆ ವಿಷ ಸೇರಿಸಿ ಪತ್ನಿಯನ್ನೇ ಸಾಯಿಸಿದ ಪತಿ

- Advertisement -
- Advertisement -

45 ವರ್ಷದ ದಂತವೈದ್ಯನೊಬ್ಬ ಪ್ರೋಟೀನ್ ಶೇಕ್‌ಗೆ ಸೈನೈಡ್‌ ಬೆರೆಸಿ ಪತ್ನಿಯನ್ನು ಕೊಂದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಜೇಮ್ಸ್ ಟೋಲಿವರ್ ಕ್ರೇಗ್ ಎಂಬಾತ ಕೊಲೆಗೈದ ಆರೋಪಿ. ತನ್ನ ಪತ್ನಿಗೆ ಪ್ರೋಟೀನ್ ಶೇಕ್‌ಗೆ ಆರ್ಸೆನಿಕ್ ಮತ್ತು ಸೈನೈಡ್‌ ಬೆರೆಸಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪದಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಪರಾಧದ ಹಿಂದಿನ ಉದ್ದೇಶವು ತನ್ನ ಪ್ರೇಯಸಿಯೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಲು ಈ ಕೃತ್ಯ ನಡೆಸಿದ್ದಾಗಿ ವರದಿಯಾಗಿದೆ. ಕೊಲೆ ಆರೋಪದ ಮೇಲೆ ಕ್ರೇಗ್ ಬಂಧನವನ್ನು ಅರೋರಾ ಪೊಲೀಸ್ ಇಲಾಖೆ ದೃಢಪಡಿಸಿದ್ದಾರೆ.

ಕ್ರೇಗ್ ಪತ್ನಿ ಏಂಜೆಲಾ ಕ್ರೇಗ್ ಅಸುನೀಗಿದ ಮಹಿಳೆ. ಏಂಜೆಲಾ ಅವರು ಸಾಯುವ ಕೆಲವು ದಿನಗಳ ಮೊದಲು ಅವರ ಪತಿ ಸಿದ್ಧಪಡಿಸಿದ ಶೇಕ್ ಅನ್ನು ಸೇವಿಸಿದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದರು. ತೀವ್ರ ತಲೆನೋವು ಮತ್ತು ತಲೆತಿರುಗುವಿಕೆಯಿಂದಾಗಿ ಪತ್ನಿಯನ್ನು ಕ್ರೇಗ್ ಆಸ್ಪತ್ರೆಗೆ ಕರೆ ತಂದಿದ್ದನು. ಆದರೆ ಚಿಕಿತ್ಸೆ ಫಲಿಸಿದೆ ಆಕೆ ಮೃತಪಟ್ಟಿದ್ದಾಳೆ. ಆಸ್ಪತ್ರೆಯಲ್ಲಿ ತೀರಿ ಹೋದ ಕೆಲವೇ ಗಂಟೆಯಲ್ಲಿ ಆರೋಪಿ ಕ್ರೇಗ್​ನನ್ನು ಬಂಧಿಸಲಾಗಿದೆ.

ಆನ್‌ಲೈನ್‌ನಲ್ಲಿ ವಿಷ ಖರೀದಿಸಿದ್ದ ಪತಿ..!
ಜೇಮ್ಸ್ ಕ್ರೇಗ್ ಆನ್‌ಲೈನ್‌ನಲ್ಲಿ ವಿಷಕಾರಿ ವಸ್ತುಗಳನ್ನು ಆರ್ಡರ್ ಮಾಡಿದ್ದಾನೆ. ಇಂಟರ್ನೆಟ್‌ನಲ್ಲಿ ವಿಷವನ್ನು ಹೇಗೆ ತಯಾರಿಸುವುದು, ಹೀಗೆ ಇನ್ನಿತರ ಹಲವಾರು ವಿಷಯಗಳನ್ನು ಹುಡುಕಾಟಗಳನ್ನು ನಡೆಸಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಜೇಮ್ಸ್ ಟೋಲಿವರ್ ಕ್ರೇಗ್ ಮತ್ತು ಏಂಜೆಲಾ ಪ್ರೇ ಕ್ರೇಗ್ ದಂಪತಿಗಳಿಗೆ ಆರು ಮಕ್ಕಳಿದ್ದರು. ತಾಯಿಯ ಅಗಲುವಿಕೆ ಮಕ್ಕಳಿಗೆ ತುಂಬಲಾರದ ನಷ್ಟವಾಗಿದೆ.

- Advertisement -

Related news

error: Content is protected !!