Sunday, November 3, 2024
spot_imgspot_img
spot_imgspot_img

2ನೇ ಮಹಾಯುದ್ಧದ ಕಾಲದ ಬಾಂಬ್ ಜಪಾನ್‌ ಏರ್‌ಪೋರ್ಟ್‌ ನಲ್ಲಿ ಸ್ಫೋಟ : ವಿಮಾನ ಹಾರಾಟ ರದ್ದು

- Advertisement -
- Advertisement -

ಜಪಾನ್‍ನ ಮಿಯಾಜಾಕಿ ವಿಮಾನ ನಿಲ್ದಾಣದಲ್ಲಿ ರನ್‍ವೇ ಬಳಿ 2ನೇ ಮಹಾಯುದ್ದದ ಕಾಲದ ಬಾಂಬ್ ಈಗ ಸ್ಫೋಟಗೊಂಡಿದ್ದು, 87 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಯುದ್ಧ ನಡೆದ ಕಾಲದಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆ ಸ್ಫೋಟಗೊಳ್ಳದ ಬಾಂಬ್‍ಗಳನ್ನು ಬಾಂಬ್ ವಿಲೇವಾರಿ ತಂಡ ನೆಲದಲ್ಲಿ ಹೂತು ಹಾಕಿತ್ತು. ಅದು ಈಗ ಸ್ಫೋಟಗೊಂಡಿದೆ ಎಂದು ಜಪಾನ್‍ನ ಸಾರಿಗೆ ಸಚಿವಾಲಯ ದೃಢಪಡಿಸಿದೆ.

“ಕಾಮಿಕೇಜ್” ದಾಳಿಯನ್ನು ನಿಲ್ಲಿಸುವ ಪ್ರಯತ್ನಗಳ ಸಮಯದಲ್ಲಿ ಕೈಬಿಡಲಾದ ಬಾಂಬ್, ಟ್ಯಾಕ್ಸಿವೇಯ ಮಧ್ಯಭಾಗದಲ್ಲಿ 23 ಅಡಿ ಅಗಲ ಮತ್ತು 3 ಅಡಿ ಆಳದ ಕುಳಿಯನ್ನು ರಚಿಸುವ ಮೂಲಕ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಹಾನಿಯನ್ನುಂಟುಮಾಡಿದೆ. ಘಟನೆಯ ವಿವರಗಳನ್ನು ಜಪಾನ್‌ನ ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.

ಸ್ಫೋಟವು ಟ್ಯಾಕ್ಸಿವೇಯಲ್ಲಿ 7 ಮೀಟರ್ ಅಗಲ ಮತ್ತು 1 ಮೀಟರ್ ಆಳದ ಕುಳಿಯನ್ನು ಸೃಷ್ಟಿಸಿದೆ. ಇದರಿಂದ ಅಧಿಕಾರಿಗಳು ರನ್‍ವೇಯನ್ನು ಮುಚ್ಚಲು ಆದೇಶಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾವುದೇ ಹೆಚ್ಚಿನ ಸ್ಫೋಟಗಳ ಅಪಾಯವಿಲ್ಲ. ಅದರ ಹಠಾತ್ ಸ್ಫೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಜಪಾನ್ ಸರ್ಕಾರದ ವಕ್ತಾರ ಯೋಶಿಮಾಸಾ ಹಯಾಶಿ ಹೇಳಿದ್ದಾರೆ.

ಜಪಾನ್‍ಗೆ ಸ್ಫೋಟಗೊಳ್ಳದ ಬಾಂಬ್‍ಗಳು ನಿರಂತರ ಬೆದರಿಕೆಯಾಗಿವೆ. ಯುದ್ಧ ನಡೆದು 79 ವರ್ಷಗಳಾಗಿವೆ. ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಹಲವು ಸ್ಫೋಟಿಸದ ಬಾಂಬ್‍ಗಳು ಪತ್ತೆಯಾಗಿವೆ. 2023 ರಲ್ಲಿ ಸ್ವಯಂ ರಕ್ಷಣಾ ಪಡೆಗಳು 37.5 ಟನ್ ತೂಕದ 2,348 ಬಾಂಬ್‍ಗಳನ್ನು ವಿಲೇವಾರಿ ಮಾಡಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!