Monday, April 29, 2024
spot_imgspot_img
spot_imgspot_img

NOKIA ಮೊಬೈಲ್ ನುಂಗಿ 4 ದಿನ ಹೊಟ್ಟೆಯಲ್ಲೇ ಇಟ್ಟುಕೊಂಡಿದ್ದ ಭೂಪ

- Advertisement -G L Acharya panikkar
- Advertisement -

ಅಪರೂಪದ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ನೋಕಿಯಾ 3310 ಮಾಡೆಲ್ ಫೋನ್​ನ್ನು ನುಂಗಿದ್ದು ನಂತರ ಆಪರೇಷನ್ ಮೂಲಕ ಹೊರಗೆ ತೆಗೆದ ಘಟನೆ ನಡೆದಿದೆ. 33 ವರ್ಷದ ವ್ಯಕ್ತಿ ಫಿನ್ನಿಷ್ ಕಂಪನಿಯ ಮಾಜಿ ಉದ್ಯೋಗಿ ಎನ್ನಲಾಗಿದೆ.

ಇನ್ನು ಮೊಬೈಲ್ ನುಂಗಿದ ವ್ಯಕ್ತಿ ಸತತ 4 ದಿನಗಳ ಕಾಲ ಮೊಬೈಲನ್ನು ತನ್ನ ಹೊಟ್ಟೆಯಲ್ಲೇ ಇಟ್ಟುಕೊಂಡಿದ್ದನಂತೆ. ಇನ್ನು ಮೊಬೈಲ್ ದೊಡ್ಡ ಗಾತ್ರದ್ದಾಗಿದ್ದರಿಂದ ಡೈಜೆಸ್ಟ್ ಆಗಿಲ್ಲ. ಹೀಗಾಗಿ 4 ದಿನಗಳ ನಂತರ ಮೊಬೈಲ್​​ನ್ನು ಆಪರೇಷನ್ ಮೂಲಕವೇ ಹೊರಗೆ ತೆಗೆಯಬೇಕಾಯ್ತು ಎಂದು ವೈದ್ಯರು ಹೇಳಿದ್ದಾರೆ. ಈ ಮಧ್ಯೆ ಮೊಬೈಲ್ ಬ್ಯಾಟರಿಯ ಕೊರ್ರೊಸಿವ್ ಆ್ಯಸಿಡ್ ಲೀಕ್ ಆಗುವ ಸಾಧ್ಯತೆ ಇತ್ತು.. ಇದರಿಂದ ಅವರ ಪ್ರಾಣವೇ ಹೋಗುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಹೊಟ್ಟೆಯೊಳಗೆ ಮೊಬೈಲ್ ಮೂರು ತುಂಡುಗಳಾಗಿ ಸ್ಕ್ಯಾನ್​ನಲ್ಲಿ ಗೋಚರಿಸಿದ ನಂತರ ವೈದ್ಯರು ಆಪರೇಷನ್ ಪ್ರಾರಂಭಿಸಿದ್ದಾರೆ. ಸತತ 2 ಗಂಟೆಗಳ ಪ್ರಯತ್ನದ ಫಲವಾಗಿ ಆಪೇಷನ್ ಯಶಸ್ವಿಯಾಗಿದೆ ಎನ್ನಲಾಗಿದೆ. ಆ ವ್ಯಕ್ತಿ ಮೊಬೈಲ್ ನುಂಗಿದ ಹಿಂದಿನ ಕಾರಣ ಏನೆಂಬುದು ಬೆಳಕಿಗೆ ಬಂದಿಲ್ಲ.

driving
- Advertisement -

Related news

error: Content is protected !!