Monday, June 22, 2026
spot_imgspot_img
spot_imgspot_img

ಭೂಗತ ಜಗತ್ತಿನ ಮನೀಶ್ ಶೆಟ್ಟಿ ಹತ್ಯೆ !! ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಪ್ರಕರಣ! ಇತ್ತೀಚೆಗೆ ಹತ್ಯೆಗೀಡಾದ ಕಿಶನ್ ಹೆಗ್ಡೆ ಹತ್ಯೆಗೂ ಮನೀಶ್ ಶೆಟ್ಟಿಯ ಶೂಟೌಟ್ ಗೂ ನಂಟಿರಬಹುದೆ???

- Advertisement -
- Advertisement -

ಬೆಂಗಳೂರು: ನಿನ್ನೆ ರಾತ್ರಿ ಸುಮಾರು 9ಗಂಟೆಯ ವೇಳೆಗೆ ಬೆಂಗಳೂರನ್ನು ಬೆಚ್ಚಿ ಬೀಳಿಸುವ ರೀತಿಯಲ್ಲಿ ಹತ್ಯೆಯೊಂದು ಕಬ್ಬನ್ ಪಾರ್ಕ್ ಸರಹದ್ದಿನ ಪೋಲೀಸ್ ಠಾಣೆಯಲ್ಲಿ ನಡೆದಿದೆ.

ಡ್ಯುಯೆಟ್ ಬಾರ್ ನ ಮಾಲಿಕರಾದ ಮನೀಶ್ ಶೆಟ್ಟಿ ತಮ್ಮ ಬಾರ್ ನ ಮುಂಭಾಗದಲ್ಲಿದ್ದ ಸಮಯದಲ್ಲಿ ಬೈಕಿನಲ್ಲಿ ಬಂದ ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.ಚೆಮ್ಮನೂರ್ ಜ್ಯುವೆಲ್ಲರಿ ದರೋಡೆ ಪ್ರಕರಣ, ಎಸ್ ಬಿ ಐ ಬ್ಯಾಂಕ್ ಬೆಳಗಾಂ ದರೋಡೆ ಪ್ರಕರಣದ ಆರೋಪಿ ಮನೀಶ್ ಶೆಟ್ಟಿ ಭೂಗತ ಲೋಕದ ಪಾತಕಿ ರವಿ ಪೂಜಾರಿಯ ಸಹಚರ.

ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುತ್ತೂರಿನ ಸಂಪ್ಯ ಠಾಣೆ ಯಲ್ಲಿ ಮನೀಶ್ ಶೆಟ್ಟಿ ವಿರುದ್ಧ ದೂರು ದಾಖಲಾಗಿತ್ತು.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮನೀಶ್ ಶೆಟ್ಟಿ ಭೂಗತ ಲೋಕದ ಸಂಪರ್ಕ ಹೊಂದಿದ್ದು ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದ.

- Advertisement -

Related news

error: Content is protected !!