Friday, May 3, 2024
spot_imgspot_img
spot_imgspot_img

ಮಂಗಳೂರು: ಇಂದಿನಿಂದ ದ.ಕ ಜಿಲ್ಲೆಯ 17 ಗ್ರಾಮ ಪಂಚಾಯತ್ ಸಂಪೂರ್ಣ ಸೀಲ್‌ಡೌನ್!

- Advertisement -G L Acharya panikkar
- Advertisement -

ಮಂಗಳೂರು: ರಾಜ್ಯದ ಹಲವು ಜಿಲ್ಲೆಗಳು ಸೋಮವಾರದಿಂದ ಅನ್‌ಲಾಕ್ ಮಾಡುತ್ತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್‌ಗಳು ಸೀಲ್‌ಡೌನ್ ಆಗಿದೆ. 50ಕ್ಕಿಂತ ಹೆಚ್ಚು ಕೊರೊನಾ ಸೋಂಕು ಪ್ರಕರಣವಿರುವ ಗ್ರಾಮ ಪಂಚಾಯತ್‌ಗಳನ್ನು ಗುರುತಿಸಿ ಸೀಲ್‌ಡೌನ್ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮಂಗಳೂರು ತಾಲ್ಲೂಕಿನ 2 ಗ್ರಾಮ ಪಂಚಾಯತ್, ಬೆಳ್ತಂಗಡಿ ತಾಲೂಕಿನ 8 ಗ್ರಾಮ ಪಂಚಾಯತ್‌ಗಳು, ಸುಳ್ಯ ತಾಲ್ಲೂಕಿನ 5 ಗ್ರಾಮ ಪಂಚಾಯತ್‌ಗಳು, ಕಡಬ ತಾಲೂಕಿನ 2 ಗ್ರಾಮ ಪಂಚಾಯತ್‌ಗಳು ಇಂದಿನಿಂದ ಸೀಲ್‌ಡೌನ್ ಆಗಿದೆ.

ಗ್ರಾಮದೊಳಗೆ ಪ್ರವೇಶ ಹಾಗೂ ನಿರ್ಗಮನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜೂನ್ 14ರಿಂದ ಜೂನ್ 21ರ ಬೆಳಗ್ಗೆ 9 ಗಂಟೆಯವರೆಗೆ ಗ್ರಾಮಗಳು ಸಂಪೂರ್ಣ ಸೀಲ್‌ಡೌನ್ ಆಗಲಿದೆ. ಆದರೆ ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂ, ಕ್ಲಿನಿಕ್ ಸೇರಿದಂತೆ ಹಾಲಿನ ಬೂತ್, ಹಾಲು ಉತ್ಪಾದನಾ ಡೈರಿ, ಪೆಟ್ರೋಲ್ ಬಂಕ್, ಬ್ಯಾಂಕ್, ತುರ್ತು ವೈದ್ಯಕೀಯ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮಂಗಳೂರು ತಾಲೂಕಿನ ನೀರುಮಾರ್ಗ, ಕೋಣಾಜೆ ಗ್ರಾಮ ಪಂಚಾಯತ್‌ಗಳು, ಬೆಳ್ತಂಗಡಿ ತಾಲ್ಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ, ಚಾರ್ಮಾಡಿ ಗ್ರಾಮ ಪಂಚಾಯತ್‌ಗಳು, ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ಕೂರು, ಕೊಲ್ಲ ಮೊಗರು, ಗುತ್ತಿಗಾರು, ಅರಂತೋಡು ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಸವಣೂರು ಗ್ರಾಮ ಪಂಚಾಯತ್‌ಗಳು ಸೀಲ್‌ಡೌನ್ ಆಗಲಿದೆ.

- Advertisement -

Related news

error: Content is protected !!