- Advertisement -
- Advertisement -


ಉಡುಪಿ: ಕಳೆದ 25 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಬಾರ್ಕೂರಿನ ನಿವಾಸಿ ಬಾಬು ಮರಕಾಲ ಮೃತಪಟ್ಟಿರುವ ವ್ಯಕ್ತಿ. ಬಾಬು ಮರಕಾಲ ಕಳೆದ ತಿಂಗಳೂ ಉಡುಪಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ರು. ಆಗ ಇವರನ್ನು ಸಮಾಜಸೇವಕರಾದ ನಿತ್ಯಾನಂದ ಆಸ್ಪತ್ರೆಗೆ ದಾಖಲಿಸಿದರು. ನಂತರ ಚಿಕಿತ್ಸೆ ಫಲಿಸಿದ ವೃದ್ಧ ಸಾವನ್ನಪ್ಪಿದು, ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ರಕ್ಷಿಸಿಡಲಾಗಿತ್ತು.
ಇದೀಗ ಸಂಬಂಧಿಕರಿಗೆ ಬಾಬು ಮರಕಾಲ ಮೃತಪಟ್ಟಿರುವ ವಿಷಯ ತಿಳಿದುಬಂದಿದೆ. ಆ ಬಳಿಕ ಸಂಬಂಧಿಕರು ಆಸ್ಪತ್ರೆಯನ್ನು ಸಂಪರ್ಕಿಸಿ ಕಾನೂನು ಪ್ರಕ್ರಿಯೆ ಮೂಲಕ ಶವವನ್ನು ಪಡೆದುಕೊಂಡರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಾಯದಿಂದ ಅಂತ್ಯಸಂಸ್ಕಾರವನ್ನೂ ನಡೆಸಿದ್ದಾರೆ. ಇವರು ಕಳೆದ 25 ವರ್ಷಗಳಿಂದ ಯಾವುದೋ ಕಾರಣಕ್ಕೆ ನಾಪತ್ತೆಯಾಗಿದ್ದಾಗಿ ತಿಳಿದುಬಂದಿದೆ.
- ಪಡುವನ್ನೂರು:ಅಕ್ರಮ ಜಾನುವಾರು ಸಾಗಾಟ ಪತ್ತೆ: ಚಾಲಕ, ಮಾಲಕ ಸೇರಿ ಮೂವರ ವಿರುದ್ಧ ಪ್ರಕರಣ
- ಮಂಗಳೂರು: ಎಸ್ಡಿಎಂ ಕಾನೂನು ಕಾಲೇಜಿನ ರಕ್ಷಿತ್ ಬಿ.ವಿ. ಅವರಿಗೆ ಡಾಕ್ಟರೇಟ್ ಪದವಿ
- ವಿಟ್ಲ: ಕಡಂಬು ಹಾಲು ಉತ್ಪಾದಕರ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ
- ಮಂಗಳೂರು: ಮಾದಕ ದ್ರವ್ಯ ಮಾರಾಟ ಜಾಲ ಪತ್ತೆ – ಓರ್ವ ಆರೋಪಿಯ ಬಂಧನ
- ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ಗೌತಮ್ ಅದಾನಿ


- Advertisement -








