Sunday, June 21, 2026
spot_imgspot_img
spot_imgspot_img

ಮಂಗಳೂರು: ಟಿವಿ ನೋಡಲು ಮನೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಪ್ರಕರಣ ದಾಖಲು!

- Advertisement -
- Advertisement -

ಮಂಗಳೂರು: ಟಿವಿ ನೋಡಲು ಮನೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಮನೆ ಮಾಲಕನನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಟೀಲು ಸಮೀಪದ ಪೆರ್ಮುದೆ ನಿವಾಸಿ ರಾಮಕೃಷ್ಣ ಎನ್ನಲಾಗಿದೆ.

ಇದನ್ನೂ ಓದಿ: ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಕೃತ್ಯದ ವಿಡಿಯೋ ಸೆರೆ ಹಿಡಿದು ಹಣಕ್ಕೆ ಬೇಡಿಕೆ!

ಆರೋಪಿ ರಾಮಕೃಷ್ಣನ ಬಾಡಿಗೆ ಮನೆಯಲ್ಲಿ ಶಿವಮೊಗ್ಗದ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ವಾಸವಿದ್ದರು. ಆ.21ರಂದು ತುರ್ತು ಕೆಲಸದ ನಿಮಿತ್ತ ತಾಯಿ ಮಕ್ಕಳನ್ನು ಬಿಟ್ಟು ಶಿವಮೊಗ್ಗಕ್ಕೆ ಹೋಗಿದ್ದರು. ಮಕ್ಕಳನ್ನು ನೋಡಿಕೊಳ್ಳುವಂತೆ ಆರೋಪಿಯ ಪತ್ನಿಗೆ ಹೇಳಿ ಹೋಗಿದ್ದರು.

ಸಂಜೆಯ ವೇಳೆಗೆ ಮೂವರು ಮಕ್ಕಳು ಆರೋಪಿಯ ಮನೆಗೆ ಟಿವಿ ನೋಡಲು ಹೋಗಿದ್ದು, ಈ ವೇಳೆ ಆರೋಪಿಯ ಪತ್ನಿ ಕಟ್ಟಿಗೆ ತರಲೆಂದು ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಈ ಸಂದರ್ಭ ಆರೋಪಿ ಎಂಟು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಅಲ್ಲದೇ ಮರುದಿನವೂ ಆರೋಪಿ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಅಪ್ರಾಪ್ತ ಬಾಲಕಿ ತನ್ನ ತಾಯಿ ಶಿವಮೊಗ್ಗದಿಂದ ಹಿಂತಿರುಗಿ ಬಂದಾಗ ವಿಷಯ ತಿಳಿಸಿದ್ದಾಳೆ.

ಇದನ್ನೂ ಓದಿ: ಕೆಎಸ್ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ಸೆರೆ!

ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ವಿವಾಹ ಸಮಾರಂಭಕ್ಕೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು; ಮನೆಯವರಿಗೆ ಹಾಗೂ ಸಬಾಭವನದ ಮಾಲಕರಿಗೆ ದಂಡ ವಿಧಿಸಿದ ತಹಶೀಲ್ದಾರ್!

driving
- Advertisement -

Related news

error: Content is protected !!