


ಮಂಗಳೂರು: ತಾಲೂಕಿನ ಉಳಾಯಿಬೆಟ್ಟು ಸಮೀಪದ ಪರಾರಿಯ ರಾಜ್ ಟೈಲ್ಸ್ ಹಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಕುಟುಂಬಕ್ಕೆ ಸೇರಿದ 8 ವರ್ಷ ಪ್ರಾಯದ ಬಾಲಕಿಯನ್ನು ಕೊಲೆಗೈದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳು ಮಧ್ಯಪ್ರದೇಶದ ಮೂಲದ ಜಯ ಸಿಂಗ್ (21)ಮುನೀಮ್ ಸಿಂಗ್(20) , ಮನೀಶ್ ತಿರ್ಕಿ(33 ) ಮತ್ತು ಝಾರ್ಖಂಡ್ ಮೂಲದ ಮುಖೇಶ್ ಸಿಂಗ್ (20) ಎನ್ನಲಾಗಿದೆ.


ರಾಜ್ ಟೈಲ್ಸ್ ಹಂಚಿನ ಕಾರ್ಖಾನೆಯಲ್ಲೇ ಕೆಲಸ ಮಾಡುತ್ತಿದ್ದ ನಾಲ್ವರು ಆರೋಪಿಗಳು ಕಾರ್ಮಿಕ ಬಾಲಕಿಯನ್ನು ತಮ್ಮ ಕೋಣೆಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಕತ್ತು ಹಿಸುಕಿ ಕೊಲೆಗೈದು ಮೋರಿಯಲ್ಲಿ ಬಿಸಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೃತ್ಯ ನಡೆಸಿದ ಬಳಿಕ ಇಬ್ಬರು ಆರೋಪಿಗಳು ಪುತ್ತೂರಿಗೆ ತೆರಳಿದ್ದಾರೆ ಎನ್ನಲಾಗಿದೆ.”ಇನ್ನಿಬ್ಬರು ಬಾಲಕಿಯನ್ನು ಹುಡುಕಾಡುವ ವೇಳೆ ತಾವೂ ಬಂದು ಯಾರಿಗೂ ಗೊತ್ತಾಗದಂತೆ ನಟಿಸಿದ್ದರು” ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪತ್ರಕರ್ತರಿಗೆ ತಿಳಿಸಿದ್ದಾರೆ.


