Thursday, April 25, 2024
spot_imgspot_img
spot_imgspot_img

ಮಂಗಳೂರು: ಮತ್ತೊಂದು ಪುರಾತನ ಬಾವಿ ಪತ್ತೆ!

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಹಲವು ಕಡೆಗಳಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಈ ಹಿಂದೆ ಹಂಪನ್ನಟ್ಟೆಯ ಬಾವಿ, ಕೊಡಿಯಾಲ್ ಬೈಲ್ ವೃತ್ತದ ಬಳಿ ಹಾಗೂ ಬೋಳಾರದಲ್ಲಿ ಬಾವಿ ಪತ್ತೆಯಾಗಿತ್ತು. ಇದೀಗ ನಗರದ ಡೊಂಗರಕೇರಿ ವೆಂಟರಮಣಕ್ಕೆ ಹೋಗುವ ರಸ್ತೆ ಪಕ್ಕದಲ್ಲೇ ಬಾವಿ ಪತ್ತೆಯಾಗಿದೆ. ಸುಮಾರು 15 ಅಡಿ ಆಳದ ಬಾವಿಯಲ್ಲಿ ಸ್ವಚ್ಛ ನೀರು ಕೂಡ ಕಂಡು ಬರುತ್ತಿದೆ.

ಈ ಬಾವಿಯನ್ನು ಮಂಗಳೂರು ನಗರ ಪಾಲಿಕೆಯ ಅಧಿಕಾರಿಗಳು ಅಭಿವೃದ್ಧಿ ಪಡಿಸುವುದಾಗಿ ಹೇಳಿಕೆ ನೀಡಿದ್ದಾರೆ. ಬಾವಿ ಪತ್ತೆಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಸ್ಥಳೀಯ ನಿವಾಸಿ ನಾರಾಯಣ ಶೆಣೈ ಅವರು ಮಂಗಳೂರು ನಗರದಲ್ಲಿ 1918ರ ಸುಮಾರಿಗೆ 18 ಬಾವಿಗಳನ್ನು ಮಂಗಳೂರು ಮುನ್ಸಿಪಾಲಿಟಿ ಕೊರೆದಿತ್ತು. ಈ ಬಗ್ಗೆ ಮಂಗಳೂರು ದರ್ಶನ’ ಪುಸ್ತಕದಲ್ಲಿ ಉಲ್ಲೇಖವಿದೆ ನಗರ ಪಾಲಿಕೆ ಪೈಪಿಂದ ಮನೆ ಮನೆಗೆ ನೀರು ಪೂರೈಸುವ ಕೆಲಸ ಮಾಡಿದ ಬಳಿಕ ಬಾವಿ ಉಪಯೋಗ ಕಡಿಮೆಯಾಗಿದೆ ಎಂದು ತಿಳಿಸಿದರು.

- Advertisement -

Related news

error: Content is protected !!