Saturday, April 27, 2024
spot_imgspot_img
spot_imgspot_img

ಮಂಗಳೂರು: ಅತೀ ಬೃಹತ್ ಗಾತ್ರದ ವಿಮಾನ ಲ್ಯಾಂಡ್; ಕಾರಣವೇನು ಗೊತ್ತಾ?

- Advertisement -G L Acharya panikkar
- Advertisement -

ಮಂಗಳೂರು: ನಗರದ ಬಜ್ಪೆಯಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಅತೀ ಬೃಹತ್ ಗಾತ್ರದ ವಿಮಾನವೊಂದು ಲ್ಯಾಂಡ್ ಆಗಿದೆ.

ಇಂಡಿಯನ್ ಏರ್ ಫೋರ್ಸ್ ಸೇರಿರುವ ಸಿ-17 ಗ್ಲೋಬ್ ಮಾಸ್ಟರ್ ಹೆಸರಿನ ವಿಮಾನ ಇದಾಗಿದೆ. ಒಟ್ಟು ನಾಲ್ಕು ಎಂಜಿನ್ ಗಳನ್ನು ಹೊಂದಿದ್ದು, ಈ ವಿಮಾನವು ಕುವೈತ್ ನಿಂದ ಇತ್ತೀಚೆಗೆ ಎನ್‌ಎಂಪಿಟಿಗೆ ಬಂದಿರುವ ಆಕ್ಸಿಜನ್ ಟ್ಯಾಂಕರ್ ಗಳನ್ನು ಖಾಲಿಯಾದ ಬಳಿಕ ಮರಳಿ ಕೊಂಡೊಯ್ಯಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ಸಿ-17 ಗ್ಲೋಬ್ ಮಾಸ್ಟರ್ ವಿಮಾನವು ಬೃಹತ್ ಗಾತ್ರದ ಸರಕುಗಳನ್ನು ಸರಬರಾಜು ಮಾಡುವ ವಿಮಾನವಾಗಿದೆ. ಟ್ಯಾಂಕರ್ ಹಾಗೂ ಇನ್ನಿತರ ಘನ ವಾಹನಗಳನ್ನು ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಹೊತ್ತೊಯ್ಯುತ್ತದೆ. ಕ್ಲಿಷ್ಟವಾದ ಭೂಪ್ರದೇಶಗಳಲ್ಲಿಯೂ, ಕಿರಿದಾದ ವಾಯು ನೆಲೆಗಳಲ್ಲಿಯೂ ಈ ವಿಮಾನವು ಸುಲಭವಾಗಿ ಲ್ಯಾಂಡ್ ಆಗುವ ನೈಪುಣ್ಯತೆ ಹೊಂದಿದೆ.

- Advertisement -

Related news

error: Content is protected !!