Monday, May 20, 2024
spot_imgspot_img
spot_imgspot_img

ಮಂಗಳೂರು: ಯುವತಿ ಸ್ನಾನ ಮಾಡುವ ದೃಶ್ಯ ಸೆರೆ; ದೂರು ದಾಖಲು!

- Advertisement -G L Acharya panikkar
- Advertisement -

ಮಂಗಳೂರು: ಮನೆಯ ಬಾತ್ ರೂಂ ನಲ್ಲಿ ಯುವತಿಯೊಬ್ಬಳು ಸ್ನಾನ ಮಾಡುತ್ತಿರುವ ದೃಶ್ಯವನ್ನು ಯುವಕನೊಬ್ಬ ಬಾತ್ ರೂಂ ನ ಕಿಟಕಿಯಿಂದ ಮೊಬೈಲ್ ನಲ್ಲಿ ಸೆರೆಹಿಡಿದು ಪರಾರಿಯಾದ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಘಟನೆ ಜುಲೈ 16 ರಂದು ರಾತ್ರಿ 7-30 ರ ಸುಮಾರಿಗೆ ಯುವತಿ ಕೆಲಸದಿಂದ ಮನೆಗೆ ಬಂದು ತಮ್ಮ ಮನೆಯ ಸ್ನಾನದ ಕೊಠಡಿಯಲ್ಲಿ ಸ್ನಾನ ಮಾಡುವಾಗ ವ್ಯಕ್ತಿಯೊಬ್ಬ ಮೊಬೈಲ್ ಕ್ಯಾಮೆರಾವನ್ನು ಬಾತ್ ರೂಮ್ ಒಳಗೆ ಕಾಣಿಸುವಂತೆ ಚಿತ್ರೀಕರಣ ಮಾಡುತ್ತಿರುವುದು ಕಂಡುಬಂದಿದೆ. ಯುವತಿ ಆ ಕೂಡಲೇ ತಾಯಿಯ ಬಳಿ ಬಂದು ವಿಷಯವನ್ನು ತಿಳಿಸಿದ್ದು, ತಾಯಿ ತಕ್ಷಣವೇ ಸ್ನಾನದ ಕೊಠಡಿಯ ಹಿಂದುಗಡೆ ಹೋಗಿ ನೋಡಿದಾಗ ಬಾತ್ ರೂಮ್ ಕಿಟಕಿಗೆ ಕಾಣುವ ಹಾಗೆ ಬೆಂಚ್ ವೊಂದನ್ನು ಹಾಕಿಕೊಂಡು ನಿಂತಿದ್ದ ವ್ಯಕ್ತಿಯೊಬ್ಬ ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ. ಈ ಘಟನೆಯ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!