Friday, April 19, 2024
spot_imgspot_img
spot_imgspot_img

ನೀಲಿ ಬೆಳಕಿನಲ್ಲಿ ಕಂಗೋಳಿಸುತ್ತಿರುವ ಸಮುದ್ರ : ಅಚ್ಚರಿ ಮೂಡಿಸಿದ ಪೃಕೃತಿಯ ವಿಸ್ಮಯ

- Advertisement -G L Acharya panikkar
- Advertisement -

ಉಡುಪಿ: ಕಳೆದ ಕೆಲವು ದಿನಗಳಿಂದ ಉಡುಪಿ ಹಾಗೂ ಮಂಗಳೂರಿನ ಸುರತ್ಕಲ್ ಬೀಚ್’ಗಳು ನೀಲಿ ಅಲೆಗಳಿಗೆ ಸಾಕ್ಷಿಯಾಗಿದೆ. ಇದನ್ನು ಬಯೋಲ್ಯುಮಿನೆನ್ಸಿಸ್ ಎಂದು ಕರೆಯುತ್ತಾರೆ. ರಾತ್ರಿ 11 ಗಂಟೆಯ ಸುಮಾರಿಗೆ ಸಮುದ್ರದ ನೀರು ನೀಲಿ ಬಣ್ಣದಲ್ಲಿ ತೆರೆಗೆ ಅಪ್ಪಳಿಸಲು ಪ್ರಾರಂಭಿಸಿ ಬೆಳಗಿನ ಜಾವದವರೆಗೂ ನೀರು ನೀಲಿ ಬಣ್ಣದಲ್ಲಿ ಇರುವುದನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ.

ಕಳೆದ ಅಕ್ಟೋಬರ್ ನಿಂದಲೂ ಪ್ರಾರಂಭವಾದ ಈ ಪ್ರಕ್ರಿಯೆ ಕ್ರಮೇಣ ಜಾಸ್ತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸದ್ಯ‌ ಈ ಸಮುದ್ರದ ನೀಲಿ ಅಲೆಗಳ ಫೋಟೋ ಎಲ್ಲೆಡೆ ವೈರಲ್ ಆಗಿದೆ.

ಸಮುದ್ರದ ವಿಸ್ಮಯ ನೋಡಲು ರಾತ್ರಿ ಸಮುದ್ರದ ದಡಕ್ಕೆ ವೀಕ್ಷಕರ ತೆಗೆಯುವವರ ದಂಡೇ ಹರಿದು ಬರುತ್ತಿದೆ.
ಮೊದಲ ಬಾರಿ ನೋಡಿದಾಗ ನಿಜಕ್ಕೂ ಪ್ರಕೃತಿಯ ಪವಾಡವೆಂದೇ ಅನಿಸುವ ಈ ನೀರಿನ ಹೊಳಪು ವೈಜ್ಞಾನಿಕವಾಗಿ ಡೈನೋಫ್ಲಾಜೆಲೆಟ್‌ ನೆಕ್ಟಿಲುಕ್ ಸಿಂಟೀಲನ್ಸ್ ಅಥವಾ ಪ್ಲ್ಯಾಂಕ್ಟನ್ ಎಂಬ ಸೂಕ್ಷ್ಮ ಜೀವಿಗಳು ದೇಹದಿಂದ ಲೂಸಿಫೆರಿನ್ ಎಂಬ ರಾಸಾಯನಿಕವನ್ನು ಸ್ರವಿಸಿದಾಗ ಈ ರೀತಿಯ ನೀಲಿ ಬಣ್ಣದ ಬೆಳಕು ಮೂಡುತ್ತವೆ. ಒಂದೇ ಜೀವಕೋಶ ಹೊಂದಿರುವ ಲಕ್ಷಾಂತರ ಸೂಕ್ಷ್ಮ ಜೀವಿಗಳ ಒಂದೆಡೆ ಸೇರಿದಾಗ ಇಂತಹ ವಿಸ್ಮಯ ಗೋಚರಿಸುತ್ತವೆ ಎನ್ನಲಾಗಿದೆ. ಇವು ಮಿಂಚುಹುಳುವಿನ ರೀತಿಯಲ್ಲಿ ಹೊಳೆಯುತ್ತವೆ ಆದ್ದರಿಂದ ನೀರು ನೀಲಿ ಬಣ್ಣದಲ್ಲಿ ಗೋಚರಿಸಿ ವಿಸ್ಮಯವನ್ನು ಸೃಷ್ಟಿಸುತ್ತವೆ.

- Advertisement -

Related news

error: Content is protected !!