Wednesday, June 17, 2026
spot_imgspot_img
spot_imgspot_img

ಮಂಗಳೂರು ದೋಣಿ ದುರಂತ: ಇಬ್ಬರು ಮೀನುಗಾರರ ಮೃತದೇಹ ಪತ್ತೆ- ಉಳಿದವರಿಗಾಗಿ ಶೋಧ ಮುಂದುವರಿಕೆ

- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ನಿನ್ನೆ ಸಂಜೆ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ 6 ಮೀನುಗಾರರ ಪೈಕಿ ಇಬ್ಬರ ಮೃತದೇಹ ಇಂದು ಪತ್ತೆಯಾಗಿದೆ.

ಶೋಧ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆ ಮೇಲೆತ್ತಿ ಮಂಗಳೂರಿನ ದಕ್ಕೆಗೆ ತರಲಾಗಿದೆ. ಮೃತರನ್ನು ಪಾಂಡುರಂಗ ಸುವರ್ಣ (58) ಹಾಗೂ ಚಿಂತನ್ (21) ಎಂದು ಗುರುತಿಸಲಾಗಿದೆ.

ಮೀನುಗಾರಿಕೆಗೆ ತೆರಳಿದ್ದ ಬೋಳಾರದ ಶ್ರೀರಕ್ಷಾ ಮೀನುಗಾರಿಕಾ ಬೋಟ್ ಮಗುಚಿ ಆರು ಮೀನುಗಾರರು ನಾಪತ್ತೆಯಾಗಿದ್ದರು. ಕರಾವಳಿ ಕಾವಲು ಪಡೆಯ ಅಧಿಕಾರಿಗಳ ತಂಡ ಶೋಧಕಾರ್ಯ ಕೈಗೊಂಡಿತ್ತು. ಅದರಲ್ಲಿ ಇನ್ನೂ ನಾಪತ್ತೆಯಾಗಿರುವ ಪ್ರೀತಂ, ಝಿಯಾವುಲ್ಲಾ, ಅನ್ಸಾರ್ ಹಾಗೂ ಹಸೈನಾರ್ ಎನ್ನುವವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ‌ ಎನ್ನಲಾಗಿದೆ.

- Advertisement -

Related news

error: Content is protected !!