Saturday, April 20, 2024
spot_imgspot_img
spot_imgspot_img

ಮಂಗಳೂರು: ಕೋಣವನ್ನು ಗುಂಡಿಕ್ಕಿ ಕೊಂದ ಪ್ರಕರಣ; ತೋಟದ ಮಾಲೀಕ ಸೇರಿದಂತೆ ಏಳು ಮಂದಿ ಸೆರೆ!

- Advertisement -G L Acharya panikkar
- Advertisement -
driving

ಮಂಗಳೂರು: ಕೋಣವನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ತೋಟದ ಮಾಲೀಕ ಸೇರಿದಂತೆ ಏಳು ಮಂದಿಯನ್ನು ಬಂಧಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಡೂರಿನ ಸಮೀಪದ ಬಲ್ಯ ಎಂಬಲ್ಲಿ ನಿನ್ನೆ ಸಂಜೆ ಬೀಡಾಡಿ ಕೋಣವೊಂದನ್ನು ಗುಂಡಿಕ್ಕಿ ಕೊಂದು ಬಳಿಕ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಈ ಘಟನೆ ಬಗ್ಗೆ ಬಜರಂಗದಳ ಕಾರ್ಯಕರ್ತರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು.ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಕೋಣದ ಉಪಟಳ ತಾಳಲಾರದೆ ತೋಟದ ಮಾಲೀಕನೇ ಕೆಲವು ಯುವಕರೊಂದಿಗೆ ಸೇರಿ ಕೊಲೆ ಮಾಡಿಸಿದ್ದು ಬೆಳಕಿಗೆ ಬಂದಿತ್ತು.

ಕೋಣವನ್ನು ಹತ್ಯೆಗೈದು ಬಳಿಕ ಮಾಂಸ ಮಾಡಿ ಒಯ್ಯಲು ಪ್ಲಾನ್ ಮಾಡಲಾಗಿತ್ತು. ಆದರೆ, ಗುಡ್ಡದಲ್ಲಿ ಗುಂಡು ಸಿಡಿದ ಸದ್ದು ಕೇಳಿ ಆಸುಪಾಸಿನ ಜನರು ಸೇರಿದ್ದು ಬಜರಂಗದಳ ಕಾರ್ಯಕರ್ತರ ಗಮನಕ್ಕೆ ತಂದಿದ್ದರು.

ತೋಟದ ಮಾಲೀಕ ಜಯರಾಮ ರೈ (58), ಆತನಿಗೆ ಸಹಕರಿಸಿದ್ದ ಮಲ್ಲೂರು ನಿವಾಸಿ ಉಮ್ಮರ್(37) ಕೋಟೆಕಾರಿನ ಉಮ್ಮರ್ ಫಾರೂಕ್ (42), ಸೋಮೇಶ್ವರದ ನಿವಾಸಿಗಳಾದ ಮಹಮ್ಮದ್ ಹುಸೇನ್ (26), ಮಹಮ್ಮದ್ ಕಲಂದರ್ (43), ಮಲ್ಲೂರಿನ ಮೊಹಮ್ಮದ್ ಸಿನಾನ್ (22), ಸೋಮೇಶ್ವರದ ಇಲ್ಯಾಸ್ (22) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಬೊಲೆರೋ ಪಿಕಪ್ ವಾಹನ, ಸ್ಕೂಟರ್, ಎಸ್ ಬಿಬಿಎಲ್ ಬಂದೂಕು, ಮಚ್ಚು ಜೀವಂತ ಗುಂಡು, ಹಗ್ಗ, ಮಾಂಸ ಮಾಡಲು ಬಳಸುವ ಹಲಗೆ, ಪ್ಲಾಸ್ಟಿಕ್ ಚೀಲಗಳು ಸೇರಿ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!