Thursday, March 28, 2024
spot_imgspot_img
spot_imgspot_img

ಮಂಗಳೂರು: ವಿದ್ಯಾರ್ಥಿ ನಾಯಕರಿಗೆ ಅನ್ಯಾಯವಾಗಿ ಜೈಲು; ಕ್ಯಾಂಪಸ್ ಫ್ರಂಟ್ ಇಂಡಿಯಾದಿಂದ ಪ್ರತಿಭಟನೆ..!

- Advertisement -G L Acharya panikkar
- Advertisement -

ಮಂಗಳೂರು: ಉತ್ತರಪ್ರದೇಶದಲ್ಲಿ ನಡೆದ ಮನಿಷಾ ಎಂಬ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಬಾಲಕಿಯ ಮನೆಗೆ ಭೇಟಿ ನೀಡಲು ತೆರಳಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ನಾಯಕರಾದ ಆತಿಕುರ್ರಹ್ಮಾನ್, ಮಸೂದ್ ಹಾಗೂ ಪತ್ರಕರ್ತ ಸಿದ್ದೀಕ್ ಕಪ್ಪನ್, ಆಲಂ ಅದೇ ರೀತಿ ಇದೇ ಪ್ರಕರಣವನ್ನು ನೆಪವಾಗಿರಿಸಿ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ನ್ನು ಕೂಡ ಅನ್ಯಾಯವಾಗಿ ಬಂಧಿಸಿ ಇಂದಿಗೆ 250 ದಿನಗಳಾಗಿವೆ. ಇದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಸಾಸ್ತಾನ, ಬ್ರಹ್ಮಾವರ್, ಮಲ್ಪೆ, ಉಡುಪಿ, ಕಾಪು, ಉಚ್ಚಿಲ, ಯರ್ಮಾಲ್, ಕಣ್ಣಂಗರ್ ಮತ್ತು ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಯಿತು.

ಅತ್ಯಾಚಾರಕ್ಕೊಳಪಟ್ಟು ಕೊಲೆಗೈಯಲ್ಪಟ್ಟ ಬಾಲಕಿಯ ಮನೆಗೆ ಭೇಟಿ ನೀಡುವುದು ಈ ದೇಶದಲ್ಲಿ ದೇಶದ್ರೋಹವಾಗುತ್ತಿದೆ, ಈ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಯೊಂದು ಜಾತ್ಯಾತೀತ ಮೌಲ್ಯದ ಮೇಲೆ ನಂಬಿಕೆಯಿರಿಸಿದ ವ್ಯಕ್ತಿಯು ಖಂಡಿಸಬೇಕಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಅಸೀಲ್ ಅಕ್ರಮ್ ಹೇಳಿದರು.

ಈ ಅಕ್ರಮ ಬಂಧನದಿಂದ ವಿದ್ಯಾರ್ಥಿ ನಾಯಕರನ್ನು, ಪತ್ರಕರ್ತರನ್ನು ಬಿಡುಗಡೆಗೊಳಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದು, ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಸೂದ್ ಮನ್ನಾ, ಸಮಿತಿ ಸದಸ್ಯರು ಸಫ್ವಾನ್, ನಝತ್ ಮತ್ತು ಇತರ ಸದಸ್ಯರು ಮತ್ತು ಬೆಂಬಲಿಗರು ಉಪಸ್ಥಿತರಿದ್ದರು.

- Advertisement -

Related news

error: Content is protected !!