Thursday, April 25, 2024
spot_imgspot_img
spot_imgspot_img

ಮಂಗಳೂರು: ಕೋವಿಡ್ ಮಾರ್ಗಸೂಚಿ ಅನಿವಾರ್ಯ ಆದರೆ ಧಾರ್ಮಿಕ ಕೇಂದ್ರಗಳ ನಿರ್ಬಂಧ ಖಂಡನೀಯ; ಇಕ್ಬಾಲ್ ಬಾಳಿಲ

- Advertisement -G L Acharya panikkar
- Advertisement -

ಮಂಗಳೂರು: ಕರ್ನಾಟಕದಲ್ಲಿ ಕೊರೋನಾ ಎರಡನೇ ಹರಡುವಿಕೆಯನ್ನು ನಿಯಂತ್ರಿಸಲು ರಾಜ್ಯಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಸೇರಿದಂತೆ ಸಾರ್ವಜನಿಕರ ಸುರಕ್ಷತೆಗಾಗಿ ವಿಧಿಸಲಾಗಿರುವ ನಿರ್ಬಂಧನೆಗಳಲ್ಲಿ ಬದಲಾವಣೆ ಅನಿವಾರ್ಯವಿದೆ ಎಂದು ಯುವ ಚಿಂತಕ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.

ಪ್ರತ್ಯೇಕವಾಗಿ ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧ ಹೇರಿರುವುದನ್ನು ಹಿಂಪಡೆಯಬೇಕು. ಎಲ್ಲಾ ಧರ್ಮದವರಿಗೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಕಟ್ಟು ನಿಟ್ಟಿನ ನಿಯಮಗಳೊಂದಿಗೆ ಅವಕಾಶ ಮಾಡಿಕೊಡಬೇಕು, ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮಕೈಗೊಂಡು, ಆದರೆ ಬಂದ್ ಮಾಡುವುದು ಪರಿಹಾರ ಮಾರ್ಗವಲ್ಲ ಎಂದು ಟ್ರೆಂಡ್ ನಾಯಕ ರಾಜ್ಯ ತರಬೇತುದಾರ ಇಕ್ಬಾಲ್ ಬಾಳಿಲ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗುಡ್ಡೆಗೆ ಬೆಂಕಿ ಬಿದ್ದಮೇಲೆ ಬಾವಿ ತೋಡಲು ಮುಂದಾದ ರೀತಿಯಾಗಿವೆ ಸರ್ಕಾರದ ನಿಲುವುಗಳು.
ಮುಸ್ಲಿಮರು ಪವಿತ್ರ ರಮಲಾನಿನಲ್ಲಿ ಪ್ರತೇಕ ಪ್ರಾರ್ಥನೆ ಮಾಡುವುದರಿಂದ ಮಸೀದಿಯ ಪ್ರವೇಶ ಅಷ್ಟೇ ಅನಿವಾರ್ಯವಾಗಿರುತ್ತದೆ. ಈಗಾಗಲೇ ಸರಕಾರ ಹೇಳಿದ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಯೇ ಪ್ರಾರ್ಥನೆ ಸಲ್ಲಿಸಿರುತ್ತಿದ್ದಾರೆ.

ಹೀಗಾಗಿಯೂ ಧಾರ್ಮಿಕ ಕೇಂದ್ರಕ್ಕೆ ನಿರ್ಬಂಧ ಹೇರಿರುವುದು ವಿಷಾದನೀಯ. ಸರಕಾರವು ಈ ಕೂಡಲೇ ಹಿಂಪಡೆದು ಧಾರ್ಮಿಕ ಕೇಂದ್ರಗಳಿಗೆ ಅನುಮತಿ ಒದಗಿಸುವಂತೆ ಒತ್ತಾಯಿಸಿದ್ದಾರೆ. ಧಾರ್ಮಿಕ ಕೇಂದ್ರಗಳಿಗೆ ಅನುಮತಿ ನೀಡುವುದಾದರೆ ನಿಯಮಗಳನ್ನು ಸಿದ್ದಪಡಿಸಿಯೇ ಅನುಮತಿ ಕೊಡಿ ಅದನ್ನು ಸ್ವೀಕರಿಸಲು ಕರ್ನಾಟಕದ ಜನತೆ ತಯ್ಯಾರಾಗಿದ್ದಾರೆ ಎಂದು ತಿಳಿಸಿರುತ್ತಾರೆ.

ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳು ತೆರೆದುಕೊಳ್ಳಲಿ. ಅಲ್ಲಿ ಪ್ರಾರ್ಥನೆಗಳು ನಡೆಯಲಿ. ಪ್ರಾರ್ಥನೆಗೆ ಹೋಗುವುದನ್ನು ತಡೆಯದಿರಿ. ಮುಸ್ಲಿಮರು ಐದು ಸಮಯ ನಮಾಝ್ ನಿರ್ವಹಿಸಲು ಮಸೀದಿಯಲ್ಲಿ ನಿಯಮ ಅಳವಡಿಸಿ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ. ಹಾಗೂ ರಾತ್ರಿಯ ಕರ್ಫ್ಯೂ ಈ ಹಿಂದಿನಂತೆ ರಾತ್ರಿ 10ರಿಂದ 5ರ ತನಕವೇ ಮುಂದುವರಿಯಲಿ ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಚಿವರುಗಳಿಗೆ ಮುಖ್ಯಮಂತ್ರಿ ಕಾರ್ಯದರ್ಶಿಗಳಿಗೆ ಈಮೇಲ್ ಮೂಲಕ ಮನವಿಯನ್ನು ನೀಡಿರುವುದಾಗಿ ತಿಳಿಸಿರುತ್ತಾರೆ.

driving
- Advertisement -

Related news

error: Content is protected !!