Tuesday, May 14, 2024
spot_imgspot_img
spot_imgspot_img

ಮಂಗಳೂರು: ಬಿಪಿಎಲ್ ಕಾರ್ಡ್ ದಾರರ ವಿದ್ಯುತ್ ಬಿಲ್ ರದ್ದು; ಮಾಹಿತಿ ಸುಳ್ಳು ಎಂದು ಸ್ಪಷ್ಟಪಡಿಸಿದ ಮೆಸ್ಕಾಂ!

- Advertisement -G L Acharya panikkar
- Advertisement -

ಮಂಗಳೂರು: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ‘ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮೂರು ತಿಂಗಳು ಮೆಸ್ಕಾಂ ಬಿಲ್ ಮನ್ನಾ ಮಾಡಲಾಗುತ್ತದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟಪಡಿಸಿದ ಮೆಸ್ಕಾಂ ಇದೊಂದು ಸುಳ್ಳು ಸುದ್ದಿ ಎಂದು ತಿಳಿಸಿದರು.

ಮೆಸ್ಕಾಂ ಲೆಟರ್‌ಹೆಡ್‌ನಲ್ಲಿ ಕಾವೂರು ಮತ್ತು ಬೆಜ್ಜವಳ್ಳಿ ಎನ್ನುವ ಹೆಸರನ್ನು ನಮೂದಿಸಲಾಗಿದೆ. ಬೆಜ್ಜವಳ್ಳಿ ಶಿವಮೊಗ್ಗ ಭಾಗದ್ದಾಗಿದ್ದು ಇಲ್ಲಿ ಹೆಸ್ಕಾಂ ಹೆಸರು ಬರುತ್ತದೆ. ಮೆಸ್ಕಾಂ ಮಂಡಗದ್ದೆ ಶಾಖೆ, ಬೆಜ್ಜವಳ್ಳಿ ಶಾಖೆ, ಕೋಂಡಿದೂರು ಶಾಖೆ ಎಂದೆಲ್ಲಾ ಲೆಟರ್ ಹೆಡ್‌ನ ವಿಳಾಸದಲ್ಲಿ ಹಾಕಲಾಗಿದೆ. ಆ ಮೂಲಕ ಇದೊಂದು ನಕಲಿ ಸಂದೇಶ ಎಂಬುದು ಮೇಲ್ನೋಟಕ್ಕೆ ತಿಳಿಯಬಹುದಾಗಿದೆ.

‘ಬಿಪಿಎಲ್ ಕಾರ್ಡ್’ ಇದ್ದವರಿಗೆ ಸರಕಾರದಿಂದ ಮೆಸ್ಕಾಂ ಕಂಪನಿಯು ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಿದೆ. ಆಧಾರ್ ಕಾರ್ಡ್ ಮತ್ತು ವಿದ್ಯುತ್ ಬಿಲ್ಲಿನ ಪ್ರತಿ ಹಾಗೂ ಬಿಪಿಎಲ್ ಕಾರ್ಡ್ ಝೆರಾಕ್ಸ್ ಪ್ರತಿಯನ್ನು ಸಮೀಪದ ಮೆಸ್ಕಾಂ ಕಚೇರಿಗೆ ಸಲ್ಲಿಸಬೇಕು’ ಎಂಬ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದನ್ನು ಬಹುತೇಕ ಗ್ರಾಹಕರು ನಿಜ ಸುದ್ದಿ ಎಂದು ಭಾವಿಸಿದ್ದರು. ಆದರೆ ಇದೊಂದು ಸುಳ್ಳು ಸುದ್ದಿ ಎಂದು ಮೆಸ್ಕಾಂ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!