Thursday, May 9, 2024
spot_imgspot_img
spot_imgspot_img

ಮಂಗಳೂರು: ಮಕ್ಕಳ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪ…! ಸೈಬರ್ ಕ್ರೈಮ್ ಠಾಣೆಯಲ್ಲಿ ಕೇಸ್ ದಾಖಲು!

- Advertisement -G L Acharya panikkar
- Advertisement -

ಮಂಗಳೂರು: ಆನ್ ಲೈನ್ ನಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಮೇಲೆ ಸದಾ ಕಣ್ಣಿಡುವ ಸೈಬರ್ ಕ್ರೈಮ್ ಸಿಐಡಿ ತಂಡ ಮಕ್ಕಳ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಮೂವರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಮಂಗಳೂರಿಗೆ ಸಂಬಂಧಿಸಿದ ಈ ದೂರನ್ನು ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಸಿಐಡಿ ಸ್ವೀಕರಿಸಿ ದೂರಿನ ಪ್ರಾಥಮಿಕ ವಿಚಾರಣೆಯನ್ನು ಕೈಗೊಂಡು ಮುಂದಿನ ತನಿಖೆಯ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದೆ‌.‌

ಜೂನ್ 24ರಂದು ಮಗುವೊಂದರ ಅಶ್ಲೀಲ ವಿಡಿಯೋವನ್ನು ಪ್ರಶಾಂತ್ ಅಲಿಯಾಸ್ ಪಚ್ಚು ಎಂಬಾತ ಡೌನ್​​ಲೋಡ್ ಮಾಡಿಕೊಂಡು ದೇವಿಕಾ ನಾಯರ್ ಎಂಬುವವರಿಗೆ ಫೇಸ್​​ಬುಕ್ ಮೆಸೆಂಜರ್​ನಲ್ಲಿ ಶೇರ್ ಮಾಡಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗುವಿನ ಅಶ್ಲೀಲತೆ ವಿಡಿಯೋ, ಆರೋಪಿಯ ಮೊಬೈಲ್ ನಂಬರ್, ಇಮೇಲ್ ಐಡಿ ಒಳಗೊಂಡಿರುವುದು ಕಂಡುಬಂದಿದ್ದು, ಈ ದೂರಿನಲ್ಲಿ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮೇ 17ರಂದು, ನಾಗೇಶ್ ಸುವರ್ಣ ಎಂಬಾತ ಫೇಸ್​​ಬುಕ್ ಮೆಸೆಂಜರ್​ನಲ್ಲಿ ಮಗುವಿನ ಅಶ್ಲೀಲ ವಿಡಿಯೋ ಚಾಟ್ ಮಾಡಿರುವ ಹಾಗೂ ಅಪ್ ಲೋಡ್ ಮಾಡಿರುವ ಮಾಹಿತಿ ಇದ್ದು ಅದರಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಜ್ವಲ್ ಕೋಟ್ಯಾನ್ ಎಂಬಾತ ಮಗುವೊಂದರ ವಿಡಿಯೋವನ್ನು ಡೌನ್​​ಲೋಡ್ ಮಾಡಿ ಕುಲಾಲ್ ಎಂಬ ಹೆಸರಿನ ಇನ್ಸ್ಟಾಗ್ರಾಂಗೆ ಶೇರ್ ಮಾಡಿರುವ ಮಾಹಿತಿ ಲಭ್ಯವಾಗಿದೆ‌‌. ದೂರಿನ ಬಗ್ಗೆ ಸೈಬರ್ ಕ್ರೈಂ ಇಲಾಖೆ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!