- Advertisement -
- Advertisement -
ಮಂಗಳೂರು: ಸುರತ್ಕಲ್‌ನ ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ಡಿ. 18ರಂದು ಮಧ್ಯಾಹ್ನ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಮತ್ತೋರ್ವ ಮಹಿಳೆಯೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮೃತಪಟ್ಟ ಮಹಿಳೆ ವಾಮನ ಎಂಬವರ ಪತ್ನಿ ವಸಂತಿ ಎಂದು ಗುರುತಿಸಲಾಗಿದೆ.
ಡಿ. 26ರಂದು ಮನೆ ಯಜಮಾನ ವಾಮನ ಅವರ ಸಹೋದರಿ ಪುಷ್ಪಾ ಮೃತಪಟ್ಟರೆ, ಡಿ.27ರಂದು ಅವರ ಪತ್ನಿ ವಸಂತಿ ಅವರು ಕೂಡ ಮೃತಪಟ್ಟಿದ್ದಾರೆ. ಕಳೆದ 9 ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಇಬ್ಬರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
- Advertisement -