Thursday, March 28, 2024
spot_imgspot_img
spot_imgspot_img

ಡ್ರಗ್ ಪೆಡ್ಲರ್ ಕಿಶೋರ್ ನನ್ನು ಬಂಧಿಸಿದ ದಿನವೇ ಆತನ ಪರ ಕರಾವಳಿಯ ಜನಪ್ರಿಯ ಶಾಸಕರೊಬ್ಬರ ಒತ್ತಡ

- Advertisement -G L Acharya panikkar
- Advertisement -

ಮಂಗಳೂರು : ಡ್ರಗ್ ಪೆಡ್ಲರ್ ಕಿಶೋರ್ ನನ್ನು ಬಂಧಿಸಿದ ದಿನವೇ ಆತನ ಪರ ಕರಾವಳಿಯ ಜನಪ್ರಿಯ ಶಾಸಕರೊಬ್ಬರು ಒತ್ತಡ ಹೇರುವ ಕೆಲಸದಲ್ಲಿ ನಿರತರಾಗಿದರು ಎನ್ನಲಾಗುತ್ತಿದೆ. ಪ್ರಕರಣದಿಂದ ಕಿಶೋರ್ ನನ್ನು ಕೈ ಬಿಡುವಂತೆ ಬಿಜೆಪಿಯ ಪ್ರಮುಖರ ಮೊರೆ ಹೋಗಿದ್ದರು.

ಆದರೆ, ಕರಾವಳಿ ಶಾಸಕನ ಎಲ್ಲ ಪ್ರಯತ್ನವೂ ವಿಫಲವಾಗಿತ್ತು. ಹೀಗಿರುವಾಗ ಡ್ರಗ್ ಪೆಡ್ಲರ್ ಗೂ ಶಾಸಕನಿಗೂ ಇರುವ ಸಂಬಂಧ ಏನು..? ಎಂಬ ಪ್ರಶ್ನೆ ಉದ್ಭವವಾಗಿತ್ತು. ಆ ಶಾಸಕನ ಆಪ್ತ ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿ. ಅಷ್ಟೇ ಅಲ್ಲ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ರೂವಾರಿ. ಕಿಶೋರ್ ಆ ವ್ಯಕ್ತಿಯ ಅಣತಿಯಂತೆ ಬುಕ್ಕಿಗಳಿಗೆ ಡ್ರಗ್ ಪಾರ್ಟಿ ಕೊಟ್ಟಿದ್ದ ಎಂದು ಹೇಳಲಾಗುತ್ತಿದೆ.

ಇನ್ನೂ, ಆ ಪ್ರತಿಷ್ಠಿತ ವ್ಯಕ್ತಿ ರಾಜಕೀಯ ಒತ್ತಡ ತಂದು ಕಿಶೋರ್ ನನ್ನು ಪ್ರಕರಣದಿಂದ ಕೈ ಬಿಡುವ ಯೋಜನೆ ಹಾಕಿಕೊಂಡಿದ್ದ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸ್ಫೋಟಕ ಮಾಹಿತಿಗಳು ಹೊರಬರುವ ಸಾಧ್ಯತೆಯಿಂದ ಆದರೆ ಖದೀಮರ ಪ್ಲಾನ್ ನನ್ನು ಸಿಸಿಬಿ ಪೊಲೀಸರು ಸಂಪೂರ್ಣ ಪ್ಲಾಫ್ ಮಾಡಿದ್ದಾರೆ.

- Advertisement -

Related news

error: Content is protected !!