Friday, June 5, 2026
spot_imgspot_img
spot_imgspot_img

ಮಂಗಳೂರು: ನಿವೃತ್ತ ಪತ್ರಕರ್ತ ಚಿಕಿತ್ಸೆ ಫಲಕಾರಿಯಾಗದೆ ನಿಧನ

- Advertisement -
- Advertisement -

ಮಂಗಳೂರು: ನಿವೃತ್ತ ಪತ್ರಕರ್ತ ಹಾಗೂ ಬೆಂಗಳೂರಿನ ಸೈಂಟ್‌ ಪಾವ್ಲ್‌ಸ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಅಸಿಸ್ಟಂಟ್‌ ಪ್ರೊಫೆಸರ್‌ ಆಗಿದ್ದ ಪಾವ್ಲ್‌ ಬೆಂಜಮಿನ್‌ ಅವರು ನಿಧನ ಹೊಂದಿದ್ದಾರೆ.

ಮೈಸೂರು ಸಮೀಪದ ಕೊಳ್ಳೇಗಾಲ ನಿವಾಸಿಯಾಗಿದ್ದ ಅವರು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜು ಮತ್ತು ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ.

ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದು ಮಂಗಳೂರಿನ ನ್ಯೂಸ್ ವೆಬ್‌ಸೈಟ್‌ ಗಳಲ್ಲಿ ಮತ್ತು ಪತ್ರಿಕೆಯಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ್ದರು.

ಬಳಿಕ ಹೊಸ ದಿಲ್ಲಿಗೆ ಹಾಗೂ ಇತ್ತೀಚೆಗೆ ಬೆಂಗಳೂರಿನ ಸೈಂಟ್‌ ಪಾವ್ಲ್‌ಸ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾಗಿ ಸೇರ್ಪಡೆ ಗೊಂಡಿದ್ದರು.

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದಾರೆ

- Advertisement -

Related news

error: Content is protected !!