- Advertisement -
- Advertisement -
ಮಂಗಳೂರು :-ಗಾಂಜಾ ಸೇವನೆಯ ಮತ್ತಿನಲ್ಲಿ ತಡರಾತ್ರಿ ನಡು ರಸ್ತೆಯಲ್ಲೇ ಇಬ್ಬರು ಯುವಕರು ತಲವಾರು ಹಿಡಿದು ದಾಂಧಲೆ ನಡೆಸಿದ ಘಟನೆ ಮಂಗಳೂರು ನಗರದ ಬಜಿಲಕೇರಿ ಎಂಬಲ್ಲಿ ನಡೆದಿದೆ.ತಲವಾರಿನೊಂದಿಗೆ ರಸ್ತೆಯಲ್ಲಿ ಕಿರುಚಾಡುತ್ತಾ ಬಂದು ಇನ್ನೊಂದು ಕೋಮಿನ ಮನೆಗೆ ನುಗ್ಗಲು ಯತ್ನಿಸಿದ್ದು,ಯಾವುದೇ ದ್ವೇಷ ಇಲ್ಲದೆ ಗಾಂಜಾದ ಅಮಲಿನಲ್ಲಿ ಕೊಲೆ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು.ಈ ವೇಳೆ ಮೂವರು ಯುವಕರು ಗಾಯಗೊಂಡಿದ್ದ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಕ್ಷಣ ಸ್ಥಳೀಯ ಬಂದರು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು,ಈ ವೇಳೆ ಪೊಲೀಸರ ಎದುರೇ ತಲವಾರು ಬೀಸಿ ಪೊಲೀಸರನ್ನೂ ಬೆದರಿಸುವ ಪ್ರಯತ್ನ ಮಾಡಿದರು.ಬಳಿಕ ಪೊಲೀಸರು ಇಬ್ಬರಿಂದಲೂ ಉಪಾಯದಿಂದ ಮಾರಕಾಸ್ತ್ರಗಳನ್ನು ಕಿತ್ತುಕೊಂಡು ಬಂಧಿಸಿದ್ದಾರೆ.ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಗಳನ್ನು ಜೈಲಿಗಟ್ಟಿದ್ದಾರೆ.
- Advertisement -