Tuesday, July 1, 2025
spot_imgspot_img
spot_imgspot_img

ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ!

- Advertisement -
- Advertisement -

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಪ್ತಾಂಗದಲ್ಲಿ ಅಡಗಿಸಿಟ್ಟು ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು
1.26 ಕೆ.ಜಿ. ಚಿನ್ನ ಸಹಿತ ಬಂಧಿಸಿದ್ದಾರೆ.

ಮಹಮ್ಮದ್ ಜಹೀರ್ ಅನೀಝ್ ಹಾಗೂ ವಾಸೀಂ ಮರ್ಜನ್ ಎಂಬವರೇ ಬಂಧಿತ ಆರೋಪಿಗಳು. ಇವರು ಡಿ. 30ರಂದು ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಮಹಮ್ಮದ್ ಜಹೀರ್ ಅನೀಝ್ ಹಾಗೂ ವಾಸೀಂ ಮರ್ಜನ್ ಗುಪ್ತಾಂಗದಲ್ಲಿ ಚಿನ್ನ ಇರಿಸಿದ್ದು ಪತ್ತೆಯಾಗಿದೆ.

ತಕ್ಷಣ ಅವರನ್ನು ಚಿನ್ನ ಸಹಿತ ಬಂಧಿಸಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಒಟ್ಟು 64,13,400 ರೂ. ಮೌಲ್ಯದ 1.26 ಕೆ.ಜಿ. ಚಿನ್ನವನ್ನು ಇವರಿಂದ ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!