- Advertisement -
- Advertisement -
ಕಲಬುರಗಿ:15 ದಿನಗಳ ಹಿಂದೆ ಕೋವಿಡ್ ತಪಾಸಣೆ ಮಾಡಿಸಿಕೊಂಡ ಆ ವ್ಯಕ್ತಿಗೆ, ತನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಎಂಬ ಸುದ್ದಿ ಕೇಳಿಯೇ ಮೃತ ಪಟ್ಟ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡದಿದೆ.
ಕಲಬುರಗಿಯ ಭವಾನಿ ನಗರದ ನಿವಾಸಿ, 55 ವರ್ಷದ ಆಟೋ ಚಾಲಕರೊಬ್ಬರು ಜು.8ರಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು.15 ದಿನಗಳ ಹಿಂದೆ ಮಾಡಿಸಿಕೊಂಡಿದ್ದ ಗಂಟಲು ದ್ರವ ತಪಾಸಣೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ ಎಂದು, (ಗುರುವಾರ) ಇಂದು ಬೆಳಿಗ್ಗೆ, ಆರೋಗ್ಯ ಇಲಾಖೆಯವರು ವ್ಯಕ್ತಿಗೆ ಕರೆ ಮಾಡಿದಾಗ ಗಾಬರಿಗೊಂಡ ಆ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಮತ್ತು ಒದ್ದಾಡುತ್ತಾ ಸ್ವಲ್ಪ ಹೊತ್ತಿನಲ್ಲೇ ಸಾವಿಗೀಡಾಗಿದ್ದಾರೆ.
ಆದರೆ, ತಡವಾಗಿ ಬಂದ ಪಾಸಿಟಿವ್ ವರದಿ ಇಂತಹದ್ದೊಂದು ಅವಘಡಕ್ಕೆ ಹಾದಿ ಮಾಡಿಕೊಟ್ಟಿದೆ. ವ್ಯಕ್ತಿಯ ಶವ ಆಸ್ಪತ್ರೆಗೆ ಕೊಂಡೊಯ್ದು ತಪಾಸಣೆ ನಡೆಸಿದಾಗ ಆತನಿಗೆ ನೆಗೆಟಿವ್ ಇರುವುದಾಗಿ ಗೊತ್ತಾಗಿದೆ.
- Advertisement -