Thursday, April 18, 2024
spot_imgspot_img
spot_imgspot_img

ಮಂಗಳೂರು: ಗಲ್ಫ್ ರಾಷ್ಟ್ರದಿಂದ ಭಾರಿ ಮೊತ್ತದ ಹವಾಲ ಹಣ ಮಂಗಳೂರಿಗೆ ರವಾನೆ- ದರೋಡೆ ನಾಟಕದಿಂದ ಹವಾಲಾ ಜಾಲದ ಗ್ಯಾಂಗ್ ಅಂದರ್!

- Advertisement -G L Acharya panikkar
- Advertisement -

ಮಂಗಳೂರು: ದರೋಡೆ ಪ್ರಕರಣವೊಂದನ್ನು ತನಿಖೆ ಮಾಡಲು ಹೊರಟ ಮಂಗಳೂರು ಪೊಲೀಸರು ಬಹುಕೋಟಿ ಹವಾಲಾ ಜಾಲವನ್ನು ಪತ್ತೆ ಮಾಡಿದ್ದಾರೆ. ಮಧ್ಯ ಪ್ರಾಚ್ಯ ರಾಷ್ಟ್ರದಿಂದ ಬರುತ್ತಿದ್ದ ಹಣವನ್ನು ನಗರದಲ್ಲಿ ಸಾಗಾಟ ಮಾಡುತ್ತಿದ್ದ ಐವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಮೊಹಮ್ಮದ್ ರಿಫಾತ್ ಅಲಿ, ಅಸ್ಫಕ್ ಯಾನೆ ಜುಟ್ಟು, ಜಾಫರ್ ಸಾಧಿಕ್, ಮೊಹಮ್ಮದ್ ಇಸ್ಮಾಯಿಲ್ ಮತ್ತು ಮಯ್ಯದಿ ಎಂದು ಗುರುತಿಸಲಾಗಿದೆ.

ಮಾ.4ರಂದು ಅಬ್ದುಲ್ ಸಲಾಮ್ ಎಂಬವರು ತನಗೆ ದುಷ್ಕರ್ಮಿಗಳು ಚೂರಿ ತೋರಿಸಿ ಬೆದರಿಸಿ ಸ್ಕೂಟರ್ ಸುಲಿಗೆ ಮಾಡಿದ್ದಾರೆ ಎಂದು ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ನೀಡಿದ್ದರು. 10 ದಿನಗಳ ಬಳಿಕ ಅಬ್ದುಲ್ ಸಲಾಂ ಮತ್ತೆ ಠಾಣೆಗೆ ಬಂದು, ಆರೋಪಿಗಳು ತಮ್ಮ ಹಣವನ್ನೂ ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದರು.

ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ, ಇದು ಹವಾಲ ಹಣವಾಗಿದ್ದು, ದೂರುದಾರನು ದರೋಡೆ ನಾಟಕವಾಡಿದ್ದು ಬೆಳಕಿಗೆ ಬಂದಿದೆ. ಇದು ಬಹುಕೋಟಿ ಹವಾಲಾ ಜಾಲವಾಗಿದ್ದು ದೂರುದಾರ ಅಬ್ದುಲ್ ಸಲಾಮ್, ಹವಾಲಾ ಹಣ ಸಾಗಿಸುವ ಏಜೆಂಟ್ ಆಗಿದ್ದ. 16.20 ಲಕ್ಷ ರೂ ಹಣವನ್ನು ಅವರು ಸಾಗಾಟ ಮಾಡುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಐವರನ್ನು ಬಂಧಿಸಲಾಗಿದ್ದು, ದೂರುದಾರ ಅಬ್ದುಲ್ ಸಲಾಮ್ ಸೇರಿದಂತೆ ಇನ್ನೂ 7-8 ಜನರನ್ನು ಬಂಧಿಸಬೇಕಿದೆ.

- Advertisement -

Related news

error: Content is protected !!