Thursday, July 3, 2025
spot_imgspot_img
spot_imgspot_img

ಮಂಗಳೂರು: ಹಿಟ್ ಆಂಡ್ ರನ್ ಪ್ರಕರಣ; ನರ್ಸಿಂಗ್ ವಿದ್ಯಾರ್ಥಿ ದಾರುಣ ಸಾವು!

- Advertisement -
- Advertisement -

ಮಂಗಳೂರು: ಫಲ್ಸರ್ ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಂತೂರು – ಪಂಪ್ ವೆಲ್ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಮೃತ ವಿದ್ಯಾರ್ಥಿ ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಮಹಾರಾಷ್ಟ್ರದ ಪೂನಾ ಮೂಲದ ಮಾನಸ್ಉಗಾಲೆ (27) ಎನ್ನಲಾಗಿದೆ.

ವಿದ್ಯಾರ್ಥಿಯೂ ತನ್ನ ಪಲ್ಸರ್ ಬೈಕಿನಲ್ಲಿ ನಂತೂರಿನಿಂದಾಗಿ ಪಂಪ್ ವೆಲ್ ನತ್ತ ಸಂಚರಿಸುತ್ತಿದ್ದಾಗ ಯಾವುದೋ ವಾಹನ ಹಿಂದಿನಿಂದ ಢಿಕ್ಕಿಯಾಗಿ ಪರಾರಿಯಾಗಿದೆ. ಕದ್ರಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಡಿಕ್ಕಿಯಾಗಿ ಪರಾರಿಯಾದ ವಾಹನದ ಪತ್ತೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!