Tuesday, April 23, 2024
spot_imgspot_img
spot_imgspot_img

ಮಂಗಳೂರು: ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ!

- Advertisement -G L Acharya panikkar
- Advertisement -

ಮಂಗಳೂರು: ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇದರ ಮುಖಾಂತರ ದ.ಕ ಜಿಲ್ಲೆಯ ತೀರ ಬಡ ಕುಟುಂಬಕ್ಕೆ ಸುಮಾರು 130 ಕ್ಕಿಂತ ಹೆಚ್ಚು ಕಿಟ್ ಗಳನ್ನು ಬಡ ಕುಟುಂಬದ ಮನೆಗೆ ತೆರಳಿ ಅಕ್ಕಿ ಜೊತೆಗೆ ದಿನಸಿ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ನೀಡಲಾಯಿತು.

ಕರೋನ ಮಹಾಮಾರಿ ನಡುವೆ ಕಷ್ಟದ ಜೀವನ ನಡೆಸುತ್ತಿದ್ದ ಅದೆಷ್ಟೋ ಕುಟುಂಬ ಇದ್ದು, ಸಮುದಾಯದ ಕುಟುಂಬಕ್ಕೆ ಇದರಿಂದ ನೆರವಾಗಲೆಂದು ಜಿಲ್ಲಾ ಸಂಘದ ನೇತೃತ್ವದಲ್ಲಿ ಹಾಗೂ ಸಮುದಾಯದ ಸದಸ್ಯರ ತಮ್ಮ ದೇಣಿಗೆಯ ನೆರವಿನ ಸಹಕಾರದಿಂದ ಪುತ್ತೂರು, ಕಡಬ, ಸುಳ್ಯ ಬೆಳ್ತಂಗಡಿ ಮಂಗಳೂರು ಬಂಟ್ವಾಳ ಮೂಡಬಿದಿರೆ ತಾಲೂಕಿನ ವ್ಯಾಪ್ತಿಯಲ್ಲಿ ವಿತರಣೆ ಮಾಡಲಾಯಿತು.

ಜಿಲ್ಲಾ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ ನೇತೃತ್ವದಲ್ಲಿ ಸತತ ಹತ್ತು ದಿನಗಳಿಂದ ಪ್ರತಿ ಮನೆಮನೆಗೆ ತೆರಳಿ ಅವರಿಗೆ ಕಿಟ್ ನೀಡುವ ಮೂಲಕ ಅವರ ಇತರ ಸಮಸ್ಯೆಗಳ ಮಾಹಿತಿ ಪಡೆದು ಜಾಗದಲ್ಲೇ ಬಗೆಹರಿಸುವ ಪ್ರಯತ್ನ ಮಾಡಲಾಯಿತು.

ಪ್ರತಿಯೊಂದು ಮನೆಗೂ ಸರ್ಕಾರದ ಸವಲತ್ತುಗಳನ್ನು, ರಸ್ತೆ ಮತ್ತು ಕುಡಿಯುವ ನೀರನ್ನು ಒದಗಿಸುವುದು ಜಿಲ್ಲಾ ಸಂಘದ ಮುಖ್ಯ ಉದ್ದೇಶವಾಗಿದೆ. ಬಡವರ ಅಭಿವೃದ್ಧಿಗಾಗಿ ನಾವು ಹಗಲು ಇರಲು ಶ್ರಮಿಸಲು ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಸಿದ್ದವೆಂದು ಭರವಸೆಯನ್ನು ನೀಡುವ ಮೂಲಕ ಸಮಾಜಕ್ಕೆ ಸಂದೇಶ ನೀಡಿದರು ಜಿಲ್ಲಾ ಮತ್ತು ತಾಲೂಕಿನ ಘಟಕದ ಸದಸ್ಯರು ಕಿಟ್ ವಿತರಣೆಯ ಸೇವಾ ಕಾರ್ಯಕ್ರಮದಲ್ಲಿ ಭಾಗಿಯಾದರು.

- Advertisement -

Related news

error: Content is protected !!