- Advertisement -
- Advertisement -
ಮಂಗಳೂರು: ಲಾಲ್‌ಭಾಗ್ ಬಳಿ ಫೆ.7 ರಂದು ರಾತ್ರಿ ತಂಡವೊಂದು ಯುವಕನೋರ್ವನ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕುದ್ರೋಳಿ ನಿವಾಸಿಗಳಾದ ಮೊಹಮ್ಮದ್ ಫಾಯಿಕ್ (18) ಮೊಹಮ್ಮದ್ ಶಾಹಿಲ್ (19) ಹಾಗೂ ಇನ್ನೋರ್ವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಫೆ.7 ರಂದು ರಾತ್ರಿ ದೀಪಕ್ ಕುಮಾರ್ ಎಂಬವರಿಗೆ ಲಾಲ್ ಬಾಗ್ ಬಳಿ ಮೂರು ಜನ ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಎಡಗೈಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

ಇದೀಗ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇತರರ ಬಗ್ಗೆ ತನಿಖೆ ಮುಂದುವರೆದಿದೆ.


- Advertisement -








