Saturday, June 27, 2026
spot_imgspot_img
spot_imgspot_img

ಮಂಗಳೂರು: ‘ನಳಿನ್ ಕಟೀಲ್ ಸೀಸನಲ್ ಲೇಕ್’ ಎಂದು ಸಂಸದರನ್ನು ಮತ್ತೆ ಕಾಲೆಳೆದ ಟ್ರೋಲಿಗರು!

- Advertisement -
- Advertisement -

ಮಂಗಳೂರು: ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆ ಪಕ್ಕದಲ್ಲಿ ಇರುವ ಸರ್ವಿಸ್ ರಸ್ತೆಗೆ ಗೂಗಲ್ ನಕಾಶೆಯ ಚಿತ್ರದಲ್ಲಿ ‘ನಳಿನ್ ಕಟೀಲ್ ಸೀಸನಲ್ ಲೇಕ್’ ಎಂದು ಟ್ರೋಲಿಗರು ಟ್ರೋಲ್ ಮಾಡುತ್ತಿದ್ದು, ಮತ್ತೊಮ್ಮೆ ಈ ಮೂಲಕ ಪಂಪ್‌ವೆಲ್ ರಸ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳೂರಿನ ಮಹಾವೀರ ವೃತ್ತವು ಜನರ ಬಾಯಲ್ಲಿ ಪಂಪ್‌ವೆಲ್ ವೃತ್ತ ಎಂದಾಗಿದ್ದು, ಗೂಗಲ್ ನಕಾಶೆಯಲ್ಲಿ ಇಂಗ್ಲಿಷ್‌ನಲ್ಲಿ ಪಂಪ್‌ವೆಲ್ ಸರ್ಕಲ್ ಎಂದಿದ್ದರೆ, ಕನ್ನಡದಲ್ಲಿ ಮಹಾವೀರ ವೃತ್ತ ಎಂದು ತೋರಿಸುತ್ತದೆ. ಜೊತೆಗೆ ಟ್ರೋಲಿಗರು ಪಂಪ್‌ವೆಲ್ ಮೇಲ್ಸೇತುವೆಯ ಹೆಸರನ್ನು ‘ಪಂಪ್‌ವೆಲ್ – ದಿ ಗ್ರೇಟ್ ವಾಲ್ ಆಫ್ ಪಂಪ್‌ವೆಲ್’ ಎಂದು ಬದಲಾಯಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಮಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮೊದಲ ಮಳೆಗೆ ಪಂಪ್‌ವೆಲ್ ವೃತ್ತದ ಬಳಿಯ ಸರ್ವಿಸ್ ರಸ್ತೆ ಜಲಾವೃತಗೊಂಡಿತ್ತು. ಈ ವೇಳೆ ಸಂಸದ ನಳಿನ್‌ಕುಮಾರ್ ಕಟೀಲ್ ಅವರು ನೀರಿನಲ್ಲಿ ಮುಳುಗಿದ ರೀತಿಯ ವಿಡಿಯೊ ಹರಿಬಿಟ್ಟು, ಟ್ರೋಲ್ ಮಾಡಲಾಗಿತ್ತು.

- Advertisement -

Related news

error: Content is protected !!