Sunday, April 28, 2024
spot_imgspot_img
spot_imgspot_img

ರಾಮೇಶ್ವರಂ ಕಫೆ ಸ್ಪೋಟ ಪ್ರಕರಣ; ಶಂಕಿತ ಉಗ್ರನನ್ನು ಮಸೀದಿಗಳಲ್ಲಿ ಹುಡುಕಿದರೆ ಪತ್ತೆಹಚ್ಚಬಹುದು – ಶರಣ್ ಪಂಪ್‌ವೆಲ್

- Advertisement -G L Acharya panikkar
- Advertisement -

ಮಂಗಳೂರು: ಬೆಂಗಳೂರಿನ ರಾಮೇಶ್ವರಂ ಕಫೆ ಸ್ಪೋಟದ ಆರೋಪಿ ಪತ್ತೆ ಹಚ್ಚಲು ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಪೊಲೀಸ್ ಅಧಿಕಾರಿಗಳು ರಾಜ್ಯದಲ್ಲಿರುವ ಮದರಸ ಹಾಗೂ ಮಸೀದಿಗಳ ಒಳಗೆ ಹೋಗಿ ಪರಿಶೀಲನೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಮೇಶ್ವರಂ ಕಫೆ ಸ್ಪೋಟದ ಆರೋಪಿ ನಮಾಜ್ ಮಾಡಿ ಬಟ್ಟೆ ಬದಲಾಯಿಸಿದ್ದಾನೆ. ಬಳ್ಳಾರಿಯಲ್ಲಿ ಓಡಾಟ ಮಾಡಿದ್ದಾನೆ. ಭಟ್ಕಳಕ್ಕೆ ತೆರಳಿದ್ದಾನೆ ಎಂಬ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ಕೊಟ್ಟಿದ್ದಾರೆ. ಆದರೂ ಆರೋಪಿಯನ್ನು ಪತ್ತೆ ಹಚ್ಚಲು ಆಗುತ್ತಿಲ್ಲ.

ಇಡೀ ದೇಶದಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಿಗೆ ಸಾಕಷ್ಟು ಮದರಸಗಳಿಗೆ ಸಂಪರ್ಕ ಇದ್ದ ಬಗ್ಗೆ ಎನ್‌ಐಎ ದಾಖಲೆ ಬಿಡುಗಡೆ ಮಾಡಿದೆ. ಹೀಗಾಗಿ ಕರ್ನಾಟಕದ ಮದರಸಗಳಲ್ಲಿ ಈತ ಯಾಕಿರಬಾರದು? ಇಲ್ಲಿವರೆಗೂ ಮಸೀದಿ ಮದರಸಗಳಲ್ಲಿ ತನಿಖೆ ಆಗಿಲ್ಲ. ಅಲ್ಲಿಗೆ ಹೋಗಿ ವಿಚಾರಣೆ ಮಾಡಿಲ್ಲ. ಕರ್ನಾಟಕದ ಮದರಸಗಳಿಗೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಲಿ ಎಂದು ಒತ್ತಾಯಿಸಿದರು.

ಪೊಲೀಸ್ ಅಧಿಕಾರಿಗಳು ಹಾಗೂ ಎನ್‌ಐಎ ಅಧಿಕಾರಿಗಳಿಗೆ ನೆರವಾಗಲು ನಾವು ಸಿದ್ಧ. ಎನ್‌ಐಎ ಬಿಡುಗಡೆ ಮಾಡಿರುವ ಆರೋಪಿಯ ಫೋಟೊವನ್ನು ವಿಎಚ್‌ಪಿಯ ಟ್ವಿಟರ್ ಫೇಸ್‌ಬುಕ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಈ ಚಹರೆಯ ವ್ಯಕ್ತಿ ಕಂಡು ಬಂದರೆ, ಪೊಲೀಸರಿಗೆ ಅಥವಾ ಎನ್‌ಐಎಗೆ ತಿಳಿಸುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.

- Advertisement -

Related news

error: Content is protected !!