Saturday, July 5, 2025
spot_imgspot_img
spot_imgspot_img

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 12 ವರ್ಷ ಕಠಿಣ ಸಜೆ ಹಾಗೂ ₹1.10 ಲಕ್ಷ ದಂಡ!

- Advertisement -
- Advertisement -

ಅಡ್ಯಾರ್: 2019ರ ಫೆಬ್ರವರಿಯಲ್ಲಿ ನಗರದ ಹೊರವಲಯದ ಅಡ್ಯಾರ್ ಬಳಿ ನಡೆದಿದ್ದ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಆರೋಪಿಗೆ 12 ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಲಾಗಿದೆ.

ಆರೋಪಿ ವಳಚ್ಚಿಲ್ ಪದವಿನ ನಝೀರ್(35) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಹಾಗೂ ಎಫ್ ಟಿ ಎಸ್ ಸಿ ಐ(ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಅವರು 12 ವರ್ಷ ಕಠಿಣ ಸಜೆ ಹಾಗೂ 1.10 ಲ.ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೋಕ್ಸೊ) ವೆಂಕಟರಮಣ ಸ್ವಾಮಿ ಸಿ. ರವರು ವಾದಿಸಿದ್ದರು.

ನಝೀರ್ ಜತೆ ಆತನಿಗೆ ಸಹಕರಿಸಿದ್ದ ವಳಚ್ಚಿಲ್ ನ ಶಮೀರ್ ಗೆ ನ್ಯಾಯಾಲಯ 6 ತಿಂಗಳ ಕಠಿಣ ಸಜೆ ವಿಧಿಸಿದೆ. ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ಇನ್ನೋರ್ವ ವಿದ್ಯಾರ್ಥಿ ಮಧ್ಯಾಹ್ನ ಅಡ್ಯಾರ್ ಸಮೀಪ ಗುಡ್ಡದ ಪಕ್ಕ ಬಂಡೆಕಲ್ಲಿನಲ್ಲಿ ಕುಳಿತಿದ್ದಾಗ ಅತ್ಯಾಚಾರ ನಡೆದಿತ್ತು. ಅವರಿಂದ ಹಣ ಸುಲಿಗೆ ಕೂಡ ಮಾಡಲಾಗಿತ್ತು.

- Advertisement -

Related news

error: Content is protected !!