Thursday, June 18, 2026
spot_imgspot_img
spot_imgspot_img

ಮಂಗಳೂರು : ಟೆಲಿಗ್ರಾಂ ಆ್ಯಪ್‌ನಲ್ಲಿ ರೇಟಿಂಗ್ ಟಾಸ್ಕ್; ಮಹಿಳೆಗೆ ಲಕ್ಷಾಂತರ ರೂ. ವಂಚನೆ..!

- Advertisement -
- Advertisement -

ಮಂಗಳೂರು : ಟೆಲಿಗ್ರಾಂ ಆ್ಯಪ್‌ನಲ್ಲಿ ರೇಟಿಂಗ್ ಟಾಸ್ಕ್ ನೀಡಿ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ದಾಖಲಾಗಿದೆ.

ವಂಚನೆಗೆ ಓಳಗಾದ ಮಹಿಳೆ ಗಾಯತ್ರಿ ಎಂದು ಗುರುತಿಸಲಾಗಿದೆ.

ಫೆ.23 ರಂದು ತನಗೆ ಟೆಲಿಗ್ರಾಂ ನಂಬರ್‌ಗೆ ಲಿಂಕ್ ಮೂಲಕ ಮೆಸೇಜ್ ಬಂದಿತ್ತು. ಅದನ್ನು ತೆರೆದಾಗ ಅವರನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರ್ಪಡೆಗೊಳಿಸಲಾಗಿತ್ತು.

ಬಳಿಕ ಸ್ಟಾರ್ ರೇಟಿಂಗ್ ಎಂಬ ಟಾಸ್ಕ್ ನೀಡಲಾಗಿದ್ದು, ತನಗೆ ಅವರಿಂದ 3,000 ರೂ. ಜಮೆ ಆಗಿತ್ತು. ಅದಕ್ಕೆ ಪ್ರತಿಯಾಗಿ 9,440 ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಲಾಯಿತು.ಬಳಿಕ ಗ್ರೂಪ್ ಮಚೆರ್ಂಟ್ ಟಾಸ್ಕ್ ಮಿಷನ್ ಪೂರ್ಣಗೊಳಿಸಲು ಹಣ ಪಾವತಿಸುವಂತೆ ತಿಳಿಸಿ ಫೆ.24ರಿಂದ 28ರವರೆಗೆ ಹಂತಹಂತವಾಗಿ 11,15,500 ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ಗಾಯತ್ರಿ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!